'ಆನ್​ಲೈನ್​ ಸಾಲದವರು ಕರೆ ಮಾಡಿದ್ರೆ ಸತ್ತು ಹೋದ ಅಂತ ಹೇಳಿ'; ಹೀಗೆ ಡೆತ್​ನೋಟ್​ ಬರೆದಿಟ್ಟು ಕಚೇರಿಯಲ್ಲೇ ನೇಣು ಹಾಕಿಕೊಂಡ...

death
ಸಾಂದರ್ಭಿಕ ಚಿತ್ರ
Published on

ಮಂಗಳೂರು: 'ಸಾಲದವರು ಕರೆ ಮಾಡಿದರೆ ಸತ್ತು ಹೋದ ಎಂದು ಹೇಳಿ' ಎಂಬುದಾಗಿ ಕರಾವಳಿಯಲ್ಲಿ ಹತ್ತು ದಿನಗಳ ಹಿಂದೆ ಯುವಕನೊಬ್ಬ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಇದೀಗ ಅದೇ ರೀತಿಯ ಆತ್ಮಹತ್ಯೆಗೆ ಮತ್ತೊಬ್ಬ ಯುವಕ ಶರಣಾಗಿದ್ದಾನೆ.

ದಕ್ಷಿಣಕನ್ನಡ ಜಿಲ್ಲೆಯ ಪಕ್ಷಿಕೆರೆ ನಿವಾಸಿ ಸುಶಾಂತ್ (26) ಆತ್ಮಹತ್ಯೆ ಮಾಡಿಕೊಂಡ ಯುವಕ. ಮಂಗಳೂರು ನಗರ ಹೊರವಲಯದ ಕುಳಾಯಿಯ ಸನ್​​ರೈಸ್​ ಕಾರ್ಪೋರೇಷನ್ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಈತ ಕಚೇರಿಯ ಒಳಗೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಡೆತ್​ನೋಟ್ ಬರೆದಿಟ್ಟಿದ್ದ ಈತ ತುಳುವಿನಲ್ಲಿ ತನ್ನ ಸಮಸ್ಯೆ ಹೇಳಿಕೊಂಡಿದ್ದಾನೆ. 'ನನಗೆ ಯಾರ ನಂಬಿಕೆಯನ್ನೂ ಉಳಿಸಿಕೊಳ್ಳಲು ಆಗಿಲ್ಲ. ಹಣದ ವಿಚಾರದಲ್ಲಿ ತೊಂದರೆ ಆದ್ರೆ ಕ್ಷಮಿಸಿ. ಆನ್​ಲೈನ್​ ಸಾಲದವರು ಕರೆ ಮಾಡಿದರೆ ಸತ್ತು ಹೋಗಿದ್ದಾನೆ ಅಂತ ಹೇಳಿ. ಎಲ್ಲರೂ ಕ್ಷಮಿಸಿ' ಎಂಬುದಾಗಿ ಈತ ಡೆತ್​ನೋಟ್​ನಲ್ಲಿ ಬರೆದಿಟ್ಟಿದ್ದಾನೆ. ಸುರತ್ಕಲ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net