ಹುಬ್ಬಳ್ಳಿ: ಇಲ್ಲಿಯ -ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಸ್ವಾಮಿ ವಿವೇಕಾನಂದ ಜನ್ಮದಿನ ಅಂಗವಾಗಿ ಜ.12ರಂದು ಬೆಳಗ್ಗೆ 10.-30ಕ್ಕೆ ಇಲ್ಲಿಯ ವಿದ್ಯಾನಗರದ ಕನಕದಾಸ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ "ಯುವ ಜಾಗೃತಿ ಆಂದೋಲನ' ಹಮ್ಮಿಕೊಂಡಿದೆ ಎಂದು ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ತಿಳಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರವಿ ದಂಡಿನ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸುವರು.
ಮೈಸೂರಿನ ಬಾನುಲಿ ನಿವೃತ್ತ ಅಧಿಕಾರಿ ಎನ್.ವಿ. ರಮೇಶ, ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಷ ಡಾ. ಸಂದೀಪ ಬೂದಿಹಾಳ, ಪ್ರೊ. ಡಿ.ಡಿ. ಮುತಾಲಿಕದೇಸಾಯಿ, ಡಾ. ಎಚ್.ವಿ. ಬೆಳಗಲಿ ಮಾತನಾಡುವರು.
ವಿವೇಕಾನಂದರ ಕುರಿತು ಕವಿಗೋಷ್ಠಿ ಜರುಗಲಿದ್ದು, ಆಸಕ್ತರು ಹೆಸರು ನೋಂದಾಯಿಸಲು ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡಶೆಟ್ರು ಪ್ರಕಟಣೆಯಲ್ಲಿ ಕೋರಿದ್ದಾರೆ.