ಯುವಕರ ಕಣ್ಮಣಿ ರಾಹುಲ್

web1
ಗೋಕಾಕ ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜನ್ಮದಿನ ಕಾರ್ಯಕ್ರಮದಲ್ಲಿ ಯುವ ನಾಯಕ ರಾಹುಲ ಜಾರಕಿಹೊಳಿ ಅವರು ಕೇಕ್ ಕತ್ತರಿಸುವ ಮೂಲಕ ಜನ್ಮದಿನ ಆಚರಿಸಿಕೊಂಡರು. ಶಿವಾನಂದ ಸ್ವಾಮೀಜಿ, ಬಸವರಾಜ ದೇವರು, ಸಿದ್ದಲಿಂಗಯ್ಯ ಸ್ವಾಮೀಜಿ, ಮುರುಘರಾಜೇಂದ್ರ ಸ್ವಾಮೀಜಿ ಇತರರು ಇದ್ದರು.
Published on

ಗೋಕಾಕ: ಶ್ರೀಮಂತಿಕೆ ಇದ್ದರೂ ಸರಳ, ಸಜ್ಜನಿಕೆಯಿಂದ ಬದುಕುತ್ತಿರುವ ಯುವ ನಾಯಕ, ಸತೀಶ ಶುಗರ್ಸ್ ನಿರ್ದೇಶಕ ರಾಹುಲ ಜಾರಕಿಹೊಳಿ ಅವರು ಯುವಕರ ಕಣ್ಮಣಿ ಎಂದು ಸುಣಧೋಳಿ ಜಡಿಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ ಹೇಳಿದರು.

ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಅಭಿಮಾನಿಗಳಿಂದ ಬುಧವಾರ ಹಮ್ಮಿಕೊಂಡಿದ್ದ ರಾಹುಲ್ ಜಾರಕಿಹೊಳಿ ಅವರ 24ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅತಿ ಚಿಕ್ಕ ವಯಸ್ಸಿನಲ್ಲಿಯೇ ಸಾಮಾಜಿಕ ಸೇವೆ ಸಲ್ಲಿಸುವ ಮೂಲಕ ದೀನ, ದಲಿತರ ಜತೆಗೆ ಧ್ವನಿ ಇಲ್ಲದವರ ಧ್ವನಿ ಆಗುತ್ತಿರುವ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಎಲ್ಲ ಯುವಕರಿಗೆ ಪ್ರೀತಿ ಪಾತ್ರರಾಗಿದ್ದಾರೆ ಎಂದರು.

ತಂದೆ ಸತೀಶ ಜಾರಕಿಹೊಳಿ ದಾರಿಯಲ್ಲಿ ಸಾಗುತ್ತಿರುವ ರಾಹುಲ್ ಅವರು ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕೈಲಾದಷ್ಟು ಸಹಾಯ ಮಾಡಿ ಯುವಕರಿಗೆ ಸಹಕಾರ ನೀಡುತ್ತಿದ್ದಾರೆ. ರಾಜಕೀಯವಾಗಿಯೂ ಮುಂದೊಂದು ದಿನ ರಾಜ್ಯ ನಾಯಕನಾಗಿ ಬೆಳೆಯಲಿ ಎಂದು ಹರಿಸಿದರು.

ಮನಸೂರ ರೇವಣಸಿದ್ಧೇಶ್ವರ ಮಠದ ಬಸವರಾಜ ದೇವರು ಮಾತನಾಡಿ, ರಾಜಕೀಯ, ಸಾಂಸ್ಕೃತಿಕವಾಗಿ ಸಚಿವ ಸತೀಶ ಜಾರಕಿಹೊಳಿ ಅವರ ಕೊಡುಗೆ ಈ ಭಾಗಕ್ಕೆ ಸಾಕಷ್ಟಿದೆ. ಅವರ ಪ್ರಯತ್ನದ ಲವಾಗಿಯೇ ಗೋಕಾಕ ನಾಡು ಸಾಂಸ್ಕೃತಿಕವಾಗಿ ಶ್ರೀಮಂತಗೊಂಡಿದೆ. ತಂದೆಗೆ ತಕ್ಕ ಮಗನಾಗಿ ರಾಹುಲ್ ಸಾಗುತ್ತಿದ್ದು, ದೇವರು ಅವರಿಗೆ ಒಳ್ಳೆಯ ಆರೋಗ್ಯ, ಆಯುಷ್ಯ ನೀಡಲೆಂದು ಆಶೀರ್ವದಿಸಿದರು. ಅರಬಾವಿಯ ದುರದುಂಡೇಶ್ವರ ಮಠದ ಸಿದ್ದಲಿಂಗಯ್ಯ ಸ್ವಾಮೀಜಿ, ಭಾಗೋಜಿಕೊಪ್ಪದ ಶಿವ ಲಿಂಗೇಶ್ವರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.

ಜನ್ಮದಿನದ ಅಂಗವಾಗಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸರ್ವ ಶ್ರೀಗಳನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಸತ್ಕರಿಸಿ, ಆಶೀರ್ವಾದ ಪಡೆದರು. ಸಾವಿರಾರು ಯುವಕರು, ಮುಖಂಡರು ರಾಹುಲ್ ಅವರಿಗೆ ಪುಷ್ಪಗುಚ್ಛ ನೀಡಿ ಶುಭ ಕೋರಿದರು. ಸರ್ವರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಘಟಪ್ರಭಾ ಸಕ್ಕರೆ ಕಾರ್ಖಾನೆ ಚೇರ್ಮನ್ ಅಶೋಕ ಪಾಟೀಲ, ಮಾಜಿ ನಗರ ಅಧ್ಯಕ್ಷ ಕುಬೇಂದ್ರ ಕಲಾಲ್, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಕಬ್ಬುರ, ಕೆ.ಟಿ. ಗಾಣಿಗೇರ, ವಿವೇಕ ಜತ್ತಿ, ಶಿವನಗೌಡ ಪಾಟೀಲ, ಅರವಿಂದ ಕಾರ್ಚಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net