

ಚಿಕ್ಕಮಗಳೂರು: ಭವ್ಯ ಭಾರತವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಇಂದಿನ ಯುವಸಮೂಹ ಸ್ವಯಂಪ್ರೇರಿತರಾಗಿ ಬಿಜೆಪಿ ಸದಸ್ಯತ್ವ ಹೊಂದುವ ಮೂಲಕ ರಾಷ್ಟçದ ಹಿತಚಿಂತನೆಗೆ ಕೈ ಜೋಡಿಸಬೇಕು ಎಂದು ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಕರೆನೀಡಿದರು.
ನಗರದ ಐಡಿಎಸ್‌ಜಿ ಕಾಲೇಜು ಸಮೀಪ ಸೋಮವಾರ ಜಿಲ್ಲಾ ಬಿಜೆಪಿ ಯುವಮೋರ್ಚಾ ಏರ್ಪಡಿಸಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಗತ್ತಿನಲ್ಲೇ ಅತ್ಯಂತ ಹೆಚ್ಚು ಯುವಕರನ್ನು ಹೊಂದಿರುವ ದೇಶ ಭಾರತ. ಯುವ ಭಾರತವನ್ನು ಸುಶಿಕ್ಷಿತ, ಕೌಶಲ್ಯವಂತ, ಸ್ವಾಭಿಮಾನ ಹಾಗೂ ಸ್ವಾವಲಂಬಿ ಭಾರತನ್ನಾಗಿ ನಿರ್ಮಿಸುವುದೇ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪ. ಆ ನಿಟ್ಟಿನಲ್ಲಿ ಯುವಕರು ಬಿಜೆಪಿ ಸದಸ್ಯತ್ವ ಹೊಂದುವ ಮೂಲಕ ರಾಷ್ಟç ಮೊದಲು ಎಂಬ ತತ್ವಕ್ಕೆ ಶಕ್ತಿ ಕೊಡಬೇಕು ಎಂದು ಹೇಳಿದರು.
ಇಂದಿನ ಯುವಕರಲ್ಲಿ ರಾಷ್ಟç ಮೊದಲು ಎಂಬುವ ಶಕ್ತಿ ಬಲಗೊಂಡರೆ ಮಾತ್ರ ದೇಶ ಸದೃಢಗೊಳ್ಳಲು ಸಾಧ್ಯ. ಕೆಲವು ರಾಜಕೀಯ ಪಕ್ಷಗಳು ವೈಯಕ್ತಿಕ ಲಾಭದ ದೃಷ್ಟಿಯಿಂದ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಿ ದೇಶವನ್ನು ದುರ್ಬಲಗೊಳಿಸಲು ಮುಂದಾಗುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾತ್ಕಾಲಿಕ ರಾಜಕಾರಣಕ್ಕೆ ದೇಶ ದುರ್ಬಲಗೊಳಿಸುವುದು ಸೂಕ್ತವಲ್ಲ. ರಾಜಕೀಯ ಮೀರಿ ದೇಶ ಪ್ರಬಲಗೊಳ್ಳಬೇಕು. ದೇಶ ಪ್ರಬಲಗೊಳ್ಳಲು ಭಾರತೀಯ ಜನತಾ ಪಕ್ಷಕ್ಕೆ ಯುವಸಮೂಹ ಸೇರ್ಪಡೆಗೊಂಡು ದೇಶದ ಒಳಿತಿಗೆ ಮುಂದಾದರೆ ಸದೃಢ ರಾಷ್ಟç ನಿರ್ಮಿಸಲು ಸಾಧ್ಯವಾಗಲಿದೆ ಎಂದರು.
ಜಿಲ್ಲಾ ಬಿಜೆಪಿ ಯುವಮೊರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ಕಾಲೇಜಿನಲ್ಲಿ ೧೮ ವರ್ಷ ಮೇಲ್ಪಟ್ಟ ಯುವಕ-ಯುವತಿಯರನ್ನು ಬಿಜೆಪಿ ಸದಸ್ಯರನ್ನಾಗಿಸುವ ಮೂಲಕ ಪ್ರಧಾನಿಗಳ ಆಶಯವನ್ನು ಈಡೇರಿಸಲಾಗುತ್ತಿದೆ. ಅದರಂತೆ ಇಂದು ಕಾಲೇಜು ಕ್ಯಾಂಪಸ್‌ನಲ್ಲಿ ನೂರಾರು ವಿದ್ಯಾರ್ಥಿಗಳು ಪಕ್ಷದ ಸದಸ್ಯತ್ವ ಪಡೆದು ರಾಷ್ಟçದ ಹಿತಚಿಂತನೆಗೆ ಕೈಜೋಡಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಸತತ ಮೂರನೇ ಭಾರಿ ಪ್ರಧಾನಿಗಳಾಗಿ ಅಧಿಕಾರ ನಿರ್ವಹಿಸುತ್ತಿರುವ ನರೇಂದ್ರ ಮೋದಿ ಅವರ ಸಂಕಲ್ಪದAತೆ ವಿದ್ಯಾರ್ಥಿಗಳನ್ನು ಸ್ವಇಚ್ಚೆಯಿಂದ ಸದಸ್ಯರನ್ನಾಗಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯ ಎಲ್ಲ ಕಾಲೇಜುಗಳ ಸಮೀಪದಲ್ಲಿ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷ ಪುಷ್ಪರಾಜ್, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಚಿನ್‌ಗೌಡ, ಕಾರ್ಯದರ್ಶಿಗಳಾದ ರಾಜೇಶ್, ಶಶಿ ಆಲ್ದೂರು, ಯುವ ಮೋರ್ಚಾ ನಗರ ಅಧ್ಯಕ್ಷ ಜೀವನ ಕೋಟೆ, ಪ್ರಮುಖರಾದ ಪುನೀತ್ ಬಿ.ಸಿ, ಕಿಟ್ಟಿ , ಮಧು ನಾಯರ್, ಕಿಶೋರ್ ಕುಟ್ಟಿ, ತಿಲಕ್ ರಾಜ್ ಅರಸ್, ಜೀವನ್, ದೀಪಕ್ ಸುವರ್ಣ, ಪ್ರಶಾಂತ್, ಪಾರ್ಥಿಬನ್ ಮತ್ತಿತರರಿದ್ದರು.