

ರಾಯಚೂರು ನಗರದ ಎಚ್‌ಆರ್‌ಬಿ ಬಡಾವಣೆಯಲ್ಲಿ ಮಹ್ಮದ ಸೋಹಲ್ ಎನ್ನುವ ಯುವಕನಿಗೆ ಆಕಸ್ಮಿಕವಾಗಿ ಎಡಗಾಲಿಗೆ ಗುಂಡು ತಗುಲಿ ಗಂಭೀರಗಾಯವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೇ 03 ರಂದು ಎಚ್‌ಆರ್‌ಬಿ ಬಡಾವಣೆಯ ನಿವಾಸಿ ಜಿಯಾ ಸೌದಾಗರ ಎನ್ನುವ ಯುಕನು ತನ್ನ ಮನೆಗೆ ಮಹ್ಮದ ಸೋಹಲ್ ಕರೆದುಕೊಂಡು ಬಂದು ಮನೆಯಲ್ಲಿ ಪಿಸ್ತುಲ್ ತೋರಿಸಿದ್ದಾರೆ. ನಂತರ ನಾಲ್ಕು ಈ ಗುಂಡುಗಳನ್ನು ಲೋಡ್ ಮಾಡಿ ನೋಡುತ್ತಿದ್ದಾಗ ಆಕಸ್ಮಿಕ ಫೈರಿಂಗ್‌ಆಗಿ ಮಹ್ಮದ ಸೋಹಲ್ ಕಾಲಿಗೆ ತಗುಲಿ ಗಾಯಗೊಂಡಿದ್ದಾನೆ.
ಕೂಡಲೇ ಯುವಕನ್ನು ರಿಮ್ಸ್ ಆಸ್ಪತೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಬೇರೆಯವರಿಗೆ ಹೇಳಿದರೆ ಪಿಸ್ತುಲ್‌ನಿಂದ ಕೊಲೆ ಮಾಡುತ್ತೇನೆಂದು ಜಿಯಾ ಸೌದಾಗರ್ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಮಹ್ಮದ ಸೋಹೆಲ್ ನಗರದ ಸದರ ಬಜಾರ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.