ಮೇ 15 ಮತ್ತು 16 ರಂದು ಯೆನೆಪೋಯ ವಿ.ವಿ.ಯಲ್ಲಿ ‘ಐಕಾನ್ ಯೂತ್ 2025’

contact
Published on


ಮಂಗಳೂರು : ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಹಾಗೂ ಯೆನೆಪೋಯ ವಿ.ವಿ.(ಡೀಮ್ಡ್ ಟು ಬಿ ) ಸಹಯೋಗದಲ್ಲಿ ‘ಐಕಾನ್ ಯೂತ್ 2025’ ಅಂತಾರಾಷ್ಟ್ರೀಯ ಯುವ ಸಮಾವೇಶ ಮೇ 15 ಮತ್ತು 16 ರಂದು ಯೆನೆಪೋಯ ವಿ.ವಿ.ಯಲ್ಲಿ ನಡೆಯಲಿದೆ.
ಸಮಾವೇಶದಲ್ಲಿ ಅಸ್ಸಾಂ, ರಾಜಸ್ಥಾನ, ಪಂಜಾಬ್, ಗುಜರಾತ್, ಮಧ್ಯ ಪ್ರದೇಶ, ಪುದುಚೇರಿ, ಜಾರ್ಖಂಡ್, ಉತ್ತರಪ್ರದೇಶ, ಬಿಹಾರ, ಛತ್ತೀಸ್‌ಗಢ ಸಹಿತ ವಿವಿಧ ರಾಜ್ಯಗಳಿಂದ ಹಾಗೂ ಶ್ರೀಲಂಕಾ, ರಷ್ಯಾ, ನೈಜೀರಿಯಾ, ನೇಪಾಳ , ಟಿಬೆಟ್ ಮುಂತಾದ ದೇಶಗಳಿಂದ ಸುಮಾರು 650ಕ್ಕೂ ಯುವ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಯೆನೆಪೋಯ ವೈದ್ಯಕೀಯ ಆಸ್ಪತ್ರೆಯ ಸಹಾಯಕ ಅಧೀಕ್ಷಕ ಡಾ.ನಾಗರಾಜ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿ.ವಿ. ಸಂಪರ್ಕ ವಿಸ್ತರಣೆ ವಿಭಾಗದ ಅಧ್ಯಕ್ಷೆ ಡಾ.ಅಶ್ವಿನಿ ಶೆಟ್ಟಿ ಮಾತನಾಡಿ, ಮೇ 15 ರಂದು ಬೆಳಗ್ಗೆ 10ಕ್ಕೆ ಯೆನೆಪೋಯಾ ಯೆಂಡುರೆನ್ಸ್ ರೆನ್‌ನಲ್ಲಿ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ನಿರ್ದೇಶಕ ಡಾ. ಸರ‌್ಹಾ ಜಯಲ್ ಸಾವಿ ಅವರು ಸಮಾವೇಶ ಉದ್ಘಾಟಿಸಲಿದ್ದಾರೆ.ಯೆನೆಪೋಯಾ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ,ಯೆನೆಪೋಯಾ ಅಬ್ದುಲಾ ಕುಂಞಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ವಿ.ವಿ. ಸಮಾಜಶಾಸ ವಿಭಾಗದ ಮುಖ್ಯಸ್ಥ ಡಾ ಮೊಹಮ್ಮದ್ ಗುತ್ತಿಗಾರ್ ಅವರು ಮಾತನಾಡಿ, ‘ಇನ್ವೆನ್ಷನಿಂಗ್ ಇಂಡಿಯಾಸ್ ್ಯೂಚರ್: ಯೂತ್ ಆ್ಯಸ್ ಚೇಂಜ್ ಮೇಕರ್’ ಎನ್ನುವ ಪರಿಕಲ್ಪನೆಯಲ್ಲಿ 145 ವಿದ್ಯಾರ್ಥಿಗಳು ತಮ್ಮ ವಿನೂತನ ಕಲ್ಪನೆಗಳ ಪೋಸ್ಟರ್ ಪ್ರದರ್ಶನ ನಡೆಸಲಿದ್ದಾರೆ. ಯುವ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ಸಮಾಜಮುಖಿ ಆವಿಷ್ಕಾರಗಳಿಗೆ ಸ್ಪರ್ಧೆ ವೇದಿಕೆಯಾಗಲಿದೆ. ದೇಶಿ ಹಾಗೂ ಅಂತಾರಾಷ್ಟ್ರೀಯ 18 ವಕ್ತಾರರು ಮತ್ತು 4 ಸಮನ್ವಯಕಾರರು ಪಾಲ್ಗೊಳ್ಳಲಿದ್ದಾರೆ. ಮೇ 16 ರಂದು ಸಮಾರೋಪ ನಡೆಯಲಿದ್ದು, ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಣದೀಪ್ ಡಿ., ರಾಜ್ಯ ಯುವ ವ್ಯವಹಾರಗಳು ಮತ್ತು ಕ್ರೀಡಾ ಇಲಾಖೆ ಆಯುಕ್ತ ಚೇತನ ಆರ್, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಕಾರ್ಯಕ್ರಮ ಸಲಹೆಗಾರ ಸೆಲ್ವನ್, ಮುಂತಾದವರು ಭಾಗವಹಿಸಲಿದ್ದಾರೆ. ಕುಲಪತಿ ಡಾ.ಎಂ. ವಿಜಯಕುಮಾರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿವರ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net