ಅ.2ರಂದು ನಗರದಲ್ಲಿ ಮಂಡ್ಯ ದಸರಾ: ಮಂಡ್ಯ ಯೂತ್ ಗ್ರೂಪ್‌ನಿಂದ ಆಯೋಜನೆ

Youth group organizes Dussehra Mandya
Published on

ಮಂಡ್ಯ: ಪ್ರತಿ ವರ್ಷದಂತೆ ಈ ಬಾರಿಯೂ ಮಂಡ್ಯ ಯೂತ್ ಗ್ರೂಪ್ ವತಿಯಿಂದ ಅನಿಲ್ ಆನಂದ್ ಡ್ರೀಮ್ ವರ್ಕ್ಸ್ ಸಹಯೊಗದೊಂದಿಗೆ ಹನ್ನೊಂದನೇ ಬಾರಿಗೆ ಅ.2ರ ವಿಜಯದಶಮಿ ದಿನದಂದು ಮಂಡ್ಯ ದಸರಾ ನಡೆಸಲಾಗುವುದು ಎಂದು ಗ್ರೂಪ್ ಅಧ್ಯಕ್ಷ ಡಾ.ಅನಿಲ್ ಆನಂದ್ ತಿಳಿಸಿದ್ದಾರೆ.

ನಗರದ ಕಾಳಿಕಾಂಬ ದೇವಾಲಯದ ಆವರಣದಲ್ಲಿರುವ ಗಜೇಂದ್ರಮೋಕ್ಷ ಕೊಳದ ಬಳಿ ಸಂಪ್ರದಾಯದಂತೆ ಅಂದು ಮಧ್ಯಾಹ್ನ 3.50ಕ್ಕೆ ಸಲ್ಲುವ ಕುಂಭಲಗ್ನದಲ್ಲಿ ಬನ್ನಿಮರಕ್ಕೆ ಪೂಜೆ ನೆರವೇರಿಸಲಾಗುವುದು. ನಂತರ ಚಾಮುಂಡೇಶ್ವರಿ ದೇವಿಯನ್ನು ಜಾನಪದ ಕಲಾತಂಡದೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net