

ಶಿವಮೊಗ್ಗ: ನಗರದ ಫ್ರೀಡಂಪಾರ್ಕ್‌ನಲ್ಲಿ ಜ.12ರಂದು ಐತಿಹಾಸಿಕ ಯುವನಿಧಿ ಯೋಜನೆ ಯುವಕರ ಪಾಲಿಗೆ ಮಹತ್ವದ್ದಾಗಿದೆ ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಪಿ.ಗಿರೀಶ್ ಹೇಳಿದರು.
ರಾಜ್ಯ ಸರ್ಕಾರದ 4 ಗ್ಯಾರಂಟಿಗಳು ಈಗಾಗಲೇ ಯಶಸ್ವಿಯತ್ತ ಸಾಗಿ, ಸುಮಾರು 1.5 ಕೋಟಿ ಕುಟುಂಬಗಳ ತಲುಪಿದೆ. ಈಗ 5ನೇ ಗ್ಯಾರಂಟಿ ಯುವನಿಧಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಚಾಲನೆ ನೀಡಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅನೇಕ ಬಡ ಮತ್ತು ರೈತ ಕುಟುಂಬದ ವಿದ್ಯಾವಂತ ನಿರುದ್ಯೋಗಿಗಳು ಅರ್ಜಿ ಹಾಕಲು ಮತ್ತು ಸಂದರ್ಶನಕ್ಕೆ ಹೋಗಲು ಸಾಲ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಅವರಿಗೆ ಮಾಸಿಕ ಸಹಾಯ ಧನವಿದ್ದರೆ ಒಂದಿಷ್ಟು ಸಹಾಯವಾಗುತ್ತದೆ. ಈ ಯೋಜನೆಯ ಜಾರಿಗೆ ಶಿವಮೊಗ್ಗ ಜಿಲ್ಲೆಯ ಯುವ ಕಾಂಗ್ರೆಸ್ ಕಾರ್ಯಕರ್ತರು ಕೂಡ ಒತ್ತಾಯ ಮಾಡಿದ್ದರು ಎಂದರು.
ರಾಜ್ಯ ಸರ್ಕಾರ ನಿರುದ್ಯೋಗಿಗಳಿಗೆ ಒಂದಿಷ್ಟಾದರು ನೆರವು ನೀಡುವ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದೆ. ಸುಮಾರು 4.80 ಲಕ್ಷ ನಿರುದ್ಯೋಗಿಗಳಿದ್ದು ಈಗಾಗಲೇ 55 ಸಾವಿರ ನೊಂದಣಿಯಾಗಿದೆ. ಶಿವಮೊಗ್ಗ ಜಿಲ್ಲೆಯಿಂದ 4 ಸಾವಿರ ಮಂದಿ ನೋಂದಣಿ ಮಾಡಿದ್ದಾರೆ. ಇದೊಂದು ನಿರಂತರ ಯೋಜನೆಯಾಗಿದೆ ಎಂದರು.
ಪ್ರಮುಖರಾದ ಎಂ.ರವಿಕುಮಾರ್, ಆರ್.ಕಿರಣ್, ಕುಮರೇಶ್, ಶರತ್ ಮರಿಯಪ್ಪ, ಮಾಲತೇಶ್, ರಾಹುಲ್, ಪುಷ್ಪಕುಮಾರ್, ನಾಗರಾಜ್ ನಾಯ್ಕ, ರಾಜೇಶ್, ಸಂದೀಪ್, ಗುರುಪ್ರಸಾದ್, ಬಿ.ಲೋಕೇಶ್ ಸುದ್ದಿಗೋಷ್ಠಿಯಲ್ಲಿದ್ದರು.