ತಮಿಳುನಾಡಿನಲ್ಲಿ ಅಪಘಾತ; ಬಿ.ಸಿ ರೋಡ್‌ನ ಯುವಕ ಸಾವು

BTW_AUG27_8 IRSHAD1
Published on

ಬಂಟ್ವಾಳ: ತಮಿಳುನಾಡಿನ ಅಂಬೂರ್ ಎಂಬಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಲಾರಿ ಅಪಘಾತದಲ್ಲಿ ಬಿ.ಸಿ.ರೋಡ್ ಸಮೀಪದ ತಲಪಾಡಿ ನಿವಾಸಿ ಮುಹಮ್ಮದ್ ಇರ್ಷಾದ್(37) ಎಂಬುವರು ಮೃತಪಟ್ಟಿದ್ದಾರೆ.

ಮಂಗಳೂರು ದಕ್ಕೆಯಿಂದ ಲಾರಿಯಲ್ಲಿ ಮೀನು ತುಂಬಿಸಿ ಶುಕ್ರವಾರ ಮಧ್ಯಾಹ್ನ ಹೊರಟಿದ್ದರು. ರಾತ್ರಿ 12:15ರ ವೇಳೆಗೆ ಅಪಘಾತ ಸಂಭವಿಸಿದೆ. ಅಂಬೂರ್ ಎಂಬಲ್ಲಿ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಇರ್ಷಾದ್ ಲಾರಿಯಲ್ಲಿ ನಿದ್ದೆ ಮಾಡುತ್ತಿದ್ದರೆ, ಬಿ.ಸಿ.ರೋಡ್ ಸಮೀಪದ ಪಲ್ಲಮಜಲು ನಿವಾಸಿ ಅಬ್ದುಲ್ ಅಝೀಝ್ ಲಾರಿ ಚಲಾಯಿಸುತ್ತಿದ್ದರು. ಅಬ್ದುಲ್ ಅಝೀಝ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.

ವಿದೇಶದಲ್ಲಿ ಉದ್ಯೋಗದಲ್ಲಿದ್ದ ಇರ್ಷಾದ್ ಲಾಕ್‌ಡೌನ್ ಬಳಿಕ ಊರಿನಲ್ಲೇ ಬಾಕಿಯಾಗಿದ್ದು, ಇತ್ತೀಚೆಗೆ ಲಾರಿಯೊಂದನ್ನು ಖರೀದಿಸಿ ಮಂಗಳೂರಿನಿಂದ ಚೆನ್ನೈಗೆ ಮೀನು ಸಾಗಾಟ ಮಾಡುತ್ತಿದ್ದರು. ಇರ್ಷಾದ್ ತಂದೆ ಐದು ತಿಂಗಳ ಹಿಂದೆ ನಿಧನರಾಗಿದ್ದಾರೆ. ಇರ್ಷಾದ್ ತಾಯಿ, ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net