ಯುವತಿಯನ್ನು ಪ್ರೀತಿಸುತ್ತಿದ್ದಾತನ ಎದೆಗೇ ಚಾಕು ಚುಚ್ಚಿದ್ರು; ಆಕೆಯನ್ನು ಭೇಟಿ ಮಾಡ್ಬೇಡ ಅಂದ್ರೂ ಮಾಡಿದ್ದಕ್ಕೆ ಇರಿದಿದ್ದವರ ಸೆರೆ

Untitled-1
ಆರೋಪಿಗಳಾದ ಮುತ್ತುರಾಜ್​, ಹೇಮಂತ್
Published on

ಬೆಂಗಳೂರು: ಇದು ಇವರಿಬ್ಬರ ನಡುವಿನ ಸಂಘರ್ಷ, ಆದರೆ ಅದಕ್ಕೆ ಕಾರಣ ಅವಳು. ಆಕೆಗಾಗಿ ಈ ಇಬ್ಬರೂ ಯಾವ ಪರಿ ಕಾದಾಡಿದ್ದರೆಂದರೆ ಒಬ್ಬ ಇನ್ನೊಬ್ಬನನ್ನು ಚಾಕುವಿನಿಂದ ಇರಿದೇ ಬಿಟ್ಟಿದ್ದ. ಕೊನೆಗೂ ಯುವತಿಗಾಗಿ ಜಗಳ ಮಾಡಿಕೊಂಡು ಇರಿದು ಪರಾರಿಯಾಗಿದ್ದ ಇಬ್ಬರನ್ನು ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ.

ಮುತ್ತುರಾಜ್​ ಮತ್ತು ಹೇಮಂತ್ ಬಂಧಿತ ಆರೋಪಿಗಳು. ಹರಿಕೀರ್ತನ್ ಎಂಬಾತ ಇರಿತಕ್ಕೊಳಗಾದ ಯುವಕ. ನಿನ್ನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳಿಬ್ಬರು ಹರಿಕೀರ್ತನ್​ ಚೂರಿ ಇರಿದು ಪರಾರಿಯಾಗಿದ್ದರು.

ವಿದ್ಯಾರ್ಥಿಯಾಗಿರುವ ಹರಿಕೀರ್ತನ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಅದೇ ವಿಚಾರಕ್ಕೆ ಮುತ್ತುರಾಜ್ ಜೊತೆ ದ್ವೇಷ ಬೆಳೆದಿತ್ತು. ಆ ಯುವತಿಯನ್ನು ಭೇಟಿ ಆಗಬಾರದು ಎಂದು ಹರಿಕೀರ್ತನ್​ಗೆ ಮುತ್ತುರಾಜ್ ಎಚ್ಚರಿಕೆಯನ್ನೂ ಕೊಟ್ಟಿದ್ದ. ಆದರೆ ಅದನ್ನು ಲೆಕ್ಕಿಸದ ಹರಿಕೀರ್ತನ್​ ಆಕೆಯನ್ನು ಭೇಟಿಯಾಗಿದ್ದ.

ಇದರಿಂದ ಸಿಟ್ಟಾದ ಮುತ್ತುರಾಜ್​, ಹೇಮಂತ್ ಎಂಬಾತನ ಜತೆಗೂಡಿ ನಿನ್ನೆ ಸುಂಕದಕಟ್ಟೆ ಬಳಿ ಬಸ್​ವೊಂದನ್ನು ಅಡ್ಡಗಟ್ಟಿ ಹರಿಕೀರ್ತನ್​ನನ್ನು ತರಾಟೆಗೆ ತೆಗೆದುಕೊಂಡಿದ್ದರು. ಮಾತ್ರವಲ್ಲದೆ ಚಾಕುವಿನಿಂದ ಆತನ ಎದೆ ಮತ್ತಿತರ ಭಾಗಕ್ಕೆ ಇರಿದು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರು ಪೊಲೀಸರು, ಆರೋಪಿಗಳಿಬ್ಬರನ್ನು ಇಂದು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net