ಯುವಕರು ರಕ್ತದಾನಕ್ಕೆ ಮುಂದಾಗಬೇಕು

22Anand2
ಬೆಳಗಾವಿ ನಗರದ ಕೆಎಲ್​ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದಲ್ಲಿ ಮಹಾವಿದ್ಯಾಲಯದ ಪ್ರಾಣಿಶಾಸ ವಿಭಾಗದಲ್ಲಿ ಭಗತ ಸಿಂಗ್​, ರಾಜಗುರು, ಸುಖದೇವ ಅವರ 94 ನೇ ಹುತಾತ್ಮ ದಿನದ ಪ್ರಯುಕ್ತ ರಕ್ತದಾನ ಶಿಬಿರ ಕಾರ್ಯಕ್ರಮದ ಜರುಗಿತು. ಮಹಾದೇವಿ ಹುಣಶೀಬೀಜ, ಪವಿತ್ರಾ ಸಮಾಜೆ ಇತರರಿದ್ದರು.
Published on

ಬೆಳಗಾವಿ: ರಕ್ತದಾನದಿಂದ ಹೃದಯಾಘಾತ ಸಮಸ್ಯೆ ನಿವಾರಣೆ ಸೇರಿದಂತೆ ಹತ್ತಾರು ಆರೋಗ್ಯ ಸಮಸ್ಯೆ ದೂರಾಗುತ್ತವೆ. ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರಿಗೆ ಜೀವದಾನ ಮಾಡಬೇಕು ಎಂದು ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕಿಯ ಸಂಶೋಧನಾ ಕೇಂದ್ರದ ವೈದ್ಯ ಡಾ.ಬಸವರಾಜ ದೇವಿಗಿ ಕರೆ ನೀಡಿದರು.

ನಗರದ ಕೆಎಲ್​ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದಲ್ಲಿ ಶನಿವಾರ ಎನ್​ಎಸ್​ಎಸ್​, ವೈಆರ್​ಸಿ ಮತ್ತು ಆರ್​ಆರ್​ಸಿ ವತಿಯಿಂದ ಸಂವೇದನಾ&2 ಅಡಿಯಲ್ಲಿ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕಿಯ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಮಹಾವಿದ್ಯಾಲಯದ ಪ್ರಾಣಿಶಾಸ ವಿಭಾಗದಲ್ಲಿ ಭಗತ ಸಿಂಗ್​, ರಾಜಗುರು, ಸುಖದೇವ ಅವರ 94ನೇ ಹುತಾತ್ಮ ದಿನದ ಪ್ರಯುಕ್ತ ಹಮ್ಮಿಕೊಳ್ಳಲಾದ ರಕ್ತದಾನ ಜಾಗೃತಿ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಪ್ರಾಚಾರ್ಯ ಎಸ್​. ಡಿ. ಗೋರಿನಾಯಕ ಮಾತನಾಡಿ, ರಕ್ತದಾನ ಶ್ರೇಷ್ಠ ಕಾರ್ಯವಾಗಿದ್ದು, ಆರೋಗ್ಯವಂತ ಯುವಕರು ರಕ್ತದಾನ ಮಾಡುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಮುಂದಾಗಬೇಕು ಎಂದರು.

ಕೆಎಲ್​ಇ ಬ್ಲಡ್​ ಬ್ಯಾಂಕ್​ನ ಮುಖ್ಯಸ್ಥ ಶ್ರೀಕಾಂತ ವೀರಗಿ, ರಾಜೇಶ ಮುರಕಿಬಾವಿ, ಎನ್​ಎಸ್​ಎಸ್​ ಅಧಿಕಾರಿ ಮಹಾದೇವಿ ಹುಣಶೀಬೀಜ, ವೈಆರ್​ಸಿ ಸಂಚಾಲಕ ಪವಿತ್ರಾ ಸಮಾಜೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net