ಯುವಕರು ಜಾನಪದ ಕಲೆ ಅರಿಯಲಿ

12
ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಸಂಕ್ರಾಂತಿ ಪ್ರಯುಕ್ತ ಎಲ್ಲರೂ ಸಾಂಪ್ರದಾಯಿಕ ಉಡುಗೆಯಲ್ಲಿ ಸಂಭ್ರಮಿಸಿದರು. ರೋಹಿಣಿ ಪಾಟೀಲ, ಡಾ. ರಾಮು ಮೂಲಗಿ, ಜಗದೀಶ ವಸ್ತ್ರದ, ಜಿ.ಎಸ್. ಬಿಕ್ಕಣ್ಣವರ, ಡಾ.ಜಿ.ಕೆ.ಭೂಮನಗೌಡರ, ಎಂ.ಎಸ್. ಪಾಟೀಲ ಇತರರು ಇದ್ದರು.
Published on

ಚನ್ನಮ್ಮನ ಕಿತ್ತೂರು: ಯುವಪೀಳಿಗೆಗೆ ನಮ್ಮ ಸಂಸ್ಕೃತಿಯ ಸೊಬಗು ಹಾಗೂ ಹಬ್ಬ-ಹರಿದಿನಗಳ ಮಹತ್ವವನ್ನು ತಿಳಿಸಲು ಶೈಕ್ಷಣಿಕ ಸಂಸ್ಥೆಗಳಲ್ಲಿ ಹಬ್ಬಗಳನ್ನು ಆಚರಿಸಿ ಜಾನಪದ ಕಲೆ ತಿಳಿಯಪಡಿಸಬೇಕು ಎಂದು ಜಾನಪದ ತಜ್ಞ ಡಾ. ರಾಮು ಮೂಲಗಿ ಹೇಳಿದರು.

ಸ್ಥಳೀಯ ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆ ಕೋಶ, ಮಹಿಳಾ ವೇದಿಕೆ, ಪರಂಪರೆ ಕೂಟ ಹಾಗೂ ವಿದ್ಯಾರ್ಥಿ ಒಕ್ಕೂಟದ ಸಂಯುಕ್ತಾಶ್ರದಲ್ಲಿ ಸಂಕ್ರಾಂತಿ ಪ್ರಯುಕ್ತ ಗುರುವಾರ ಆಯೋಜಿಸಲಾಗಿದ್ದ ಗ್ರಾಮ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯಾಂತ್ರಿಕ ಯುಗದಲ್ಲಿ ನಮ್ಮ ಸಂಸ್ಕೃತಿ ಮರೆಯುತ್ತಿದ್ದೇವೆ. ಕೇವಲ ಯಂತ್ರಗಳಿಗೆ ಮಾರುಹೋಗಿ ನಾವು ನಮ್ಮ ಮನೆಯಲ್ಲಿಯೇ ಅಪರಿಚಿತರಾಗುತ್ತಿದ್ದೇವೆ. ಆ ವಾತಾವರಣದಿಂದ ಮುಕ್ತವಾಗಿ ಎಲ್ಲರೂ ಬೆರೆಯಬೇಕಿದೆ ಎಂದರು. ಜಿಪಂ ಮಾಜಿ ಸದಸ್ಯೆ ರೋಹಿಣಿ ಪಾಟೀಲ, ಕಿತ್ತೂರು ರಾಣಿ ಚನ್ನಮ್ಮ, ಬೆಳವಡಿ ಮಲ್ಲಮ್ಮ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದು ಅವರ ಜೀವನಗಾಥೆ ನಮಗೆ ದಾರಿದೀಪವಾಗಿದೆ ಎಂದರು.

ಕಿನಾವಿವ ಸಂಘದ ಚೇರ್ಮನ್ ಜಗದೀಶ ವಸ್ತ್ರದ, ಮಹಿಳಾ ವೇದಿಕೆ ಚೇರ್ಮನ್ ಪ್ರಿಯಂಕಾ ದಾಮೋಣೆ ಮಾತನಾಡಿದರು.
ವಿದ್ಯಾರ್ಥಿಗಳು ಜಾನಪದ ಗೀತೆ ಹಾಗೂ ಸಾಂಸ್ಕೃತಿಕ ನತ್ಯಗಳನ್ನು ಪ್ರದರ್ಶಿಸಿದರು. ಸಂಕ್ರಾಂತಿ ಪ್ರಯುಕ್ತ ಎಲ್ಲರೂ ಸಾಂಪ್ರದಾಯಿಕ ಧಿರಿಸು ತೊಟ್ಟಿದ್ದರು. ಕಿನಾವಿವ ಸಂಘದ ಗೌರವ ಕಾರ್ಯದರ್ಶಿ ಜೆ.ಎಸ್.ಬಿಕ್ಕಣ್ಣವರ, ನಿರ್ದೇಶಕ ಎಸ್.ಎಸ್.ವಂಸಂಗ, ಎನ್.ಎಸ್.ಹಿರೇಮಠ, ಡಿ.ಆರ್.ಪಾಟೀಲ, ವಿ.ಆರ್.ಪಾಟೀಲ, ಜಗದೀಶ ಘಟ್ನಟ್ಟಿ, ಪ್ರಾಚಾರ್ಯ ಎಂ.ಎಸ್.ಪಾಟೀಲ, ಅಕ್ಷತಾ ಮಾಟೊಳ್ಳಿ, ಪ್ರಾಚಾರ್ಯ ಡಾ. ಜಿ.ಕೆ.ಭೂಮನಗೌಡರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net