

ಮಡಿಕೇರಿ: ಕೊಡಗು ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಅ.೧೬ರಂದು ಮಡಿಕೇರಿಯಲ್ಲಿ ನಡೆಯಲಿದ್ದು, ಯುವ ಸಮೂಹಕ್ಕಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ್, ಕೊಡಗು ಜಿಲ್ಲಾ ಯುವ ಒಕ್ಕೂಟ, ತಾಲೂಕು ಯುವ ಒಕ್ಕೂಟ, ಮಡಿಕೇರಿ, ಸೋಮವಾರಪೇಟೆ ಮತ್ತು ವಿರಾಜಪೇಟೆ, ಸರ್ಕಾರಿ ಪದವಿ ಪೂರ್ವ ಕಾಲೇಜ್‌ನ ಸಹಯೋಗದೊಂದಿಗೆ ನಗರದ ಸರಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಸ್ಪರ್ಧೆಗಳು ನಡೆಯಲಿದೆ. ಆಸಕ್ತ ಸ್ಪರ್ಧಿಗಳು ಅಂದು ಬೆಳಿಗ್ಗೆ ೯.೩೦ ಗಂಟೆಯೊಳಗೆ ಹಾಜರಿದ್ದು ಹೆಸರು ನೋಂದಾಯಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಗುಂಪು ಸ್ಪರ್ಧೆ: ಜನಪದ ನೃತ್ಯ ೧೦ ಜನರ ತಂಡ, ೧೫ ನಿಮಿಷಗಳು, ಜನಪದ ಗೀತೆ ೧೦ ಜನರ ತಂಡ, ೭ ನಿಮಿಷ ಕಾಲಾವಕಾಶ ನೀಡಲಾಗುವುದು. ಯಾವುದೇ ರೀತಿಯ ರೀಮಿಕ್ಸ್ ಅಥವಾ ಮೂಲ ಹಾಡಿನ ಬದಲಾವಣೆಗೆ ಅವಕಾಶ ಇರುವುದಿಲ್ಲ. ಮೂಲ ಜನಪದ ಗೀತೆಯನ್ನು ಮಾತ್ರ ಪರಿಗಣಿಸತಕ್ಕದ್ದು, ಕನ್ನಡ ಭಾಷೆಯಲ್ಲಿ ಮಾತ್ರ ಇರಬೇಕು ಎಂದು ತಿಳಿಸಿದ್ದಾರೆ.
ವೈಯಕ್ತಿಕ ಸ್ಪರ್ಧೆಗಳು: ಕಥೆ ಬರೆಯುವುದು ೬೦ ನಿಮಿಷ), ಕವಿತೆ ಬರೆಯುವ ಸ್ಪರ್ಧೆ(೯೦ ನಿಮಿಷ), ಚಿತ್ರಕಲೆ ಸ್ಪರ್ಧೆ(೯೦ ನಿಮಿಷ, ಭಾಷಣ ಸ್ಪರ್ಧೆ(೭ ನಿಮಿಷ), ವಿಜ್ಞಾನ ಮೇಳ ನಡೆಯಲಿದೆ. ಯುವಜನೋತ್ಸವ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ಯುವಕ, ಯುವತಿಯರು, ಶಾಲಾ, ಕಾಲೇಜ್‌ನ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದಾಗಿದೆ. ವಯೋಮಿತಿ ೧೫ ರಿಂದ ೨೯ ವರ್ಷಗಳಾಗಿರಬೇಕು. ಎಲ್ಲಾ ಸ್ಪರ್ಧೆಗಳು ಯುವಕ, ಯುವತಿಯಗೆ ಒಟ್ಟಾಗಿ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ೯೫೯೧೧೩೭೨೭೫, ೯೮೪೫೫೭೧೨೯೦ ಸಂಪರ್ಕಿಸಬಹುದು ಎಂದು ಪಿ.ಪಿ.ಸುಕುಮಾರ್ ತಿಳಿಸಿದ್ದಾರೆ.