

ಮಂಗಳೂರು: ನಗರ ಹೊರವಲಯದ ಕುಡುಪು ಭಟ್ರ ಕಲ್ಲುರ್ಟಿ ದೈವಸ್ಥಾನ ಬಳಿ ಭಾನುವಾರ ಅಪರಿಚಿತನನ್ನು 30ಕ್ಕೂ ಅಧಿಕವಿದ್ದ ಗುಂಪು ಹಲ್ಲೆ ನಡೆಸಿ ಹತ್ಯೆಗೈದಿರುವುದು ದೃಢಪಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿ 15 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಹಲವರು ಕೃತ್ಯದಲ್ಲಿ ಭಾಗಿಯಾಗಿದ್ದು, ಅವರನ್ನೂ ಬಂಧಿಸಲಾಗುವುದು ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದರು.
ತಿರುವೈಲ್ ಗ್ರಾಮದ ಕುಡುಪು ನಡುಮನೆಯ ಸಚಿನ್ ಟಿ.(26), ದೇವದಾಸ್(50), ಕುಡುಪು ಮಂಗಳನಗರದ ಮಂಜುನಾಥ್(32), ಮಂಗಳ ನಗರ 15ನೇ ಕ್ರಾಸ್ ಶಿವನಿಲಯದ ನಿತೇಶ್ ಕುಮಾರ್ ಯಾನೆ ಸಂತೋಷ್(33), ನೀರುಮಾರ್ಗ ಪೆದಮಲೆ ಸುಬ್ರಹ್ಮಣ್ಯ ನಗರದ ಸಾಯಿದೀಪ್(29), ಕುಡುಪು ಕಟ್ಟೆ ನಡುಮನೆ ದೀಕ್ಷಿತ್ ಕುಮಾರ್(32), ಪ್ರಾತಸೈಫ್ ಕಾಲನಿಯ ವಿವಿಯನ್ ಆಳ್ವಾರಿಸ್(41), ಕುಡುಪುಕಟ್ಟೆಯ ಶ್ರೀದತ್ತ(32), ಧನುಷ್(31), ಕದ್ರಿ ಕೈಬಟ್ಟಲು ನಿವಾಸಿ ರಾಹುಲ್(23), ವಾಮಂಜೂರು ದೇವರಪದವು ಸಂದೀಪ್(23), ಕುಲಶೇಖರ ಜ್ಯೋತಿನಗರದ ಪ್ರದೀಪ್ ಕುಮಾರ್(35), ಕುಲಶೇಖರ ಚೌಕಿ ದೀಕ್ಷಿತ್(27), ಶಕ್ತಿನಗರ ಬೌಲ್ಯ ನಿವಾಸಿ ಮನೀಶ್ ಶೆಟ್ಟಿ (21), ಕುಡುಪು ದೇವಸ್ಥಾನದ ಬಳಿಯ ಕಿಶೋರ್ ಕುಮಾರ್(37) ಬಂಧಿತರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.