ಹೃದಯಾಘಾತದಿಂದ ಬಸ್‌ನಲ್ಲೇ ಮೃತ್ಯು

Man Death 29 Feb 20
Published on

ಕುಂದಾಪುರ : ಬೆಂಗಳೂರು- ಕುಂದಾಪುರ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಬಳ್ಕೂರು ಗ್ರಾಮ ನಿವಾಸಿ ಬೆಂಗಳೂರಲ್ಲಿ ಇಂಜಿನಿಯರಿಂಗ್ ಓದುತ್ತಿರುವ ಸುಹಾಸ್ ಮಯ್ಯ (22) ಭಾನುವಾರ ಬಸ್‌ನಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಕುಂದಾಪುರದ ಮೂರುಕೈ ಬಳಿ ಬಸ್ಸಿನಲ್ಲಿ ಇದ್ದ ಎಲ್ಲ ಪ್ರಯಾಣಿಕರು ಇಳಿದರೂ ಸುಹಾಸ್ ಕುಳಿತೇ ಇದ್ದುದನ್ನು ಗಮನಿಸಿ ನಿರ್ವಾಹಕ ಅವರನ್ನು ಎಬ್ಬಿಸಲು ಹೋದಾಗ ಮೃತಪಟ್ಟಿರುವುದು ಗೊತ್ತಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net