ವಿದ್ಯುತ್ ಪ್ರವಹಿಸಿ ಯುವಕ ಸಾವು

powerlines
Published on

ಗಂಗೊಳ್ಳಿ: ವಿದ್ಯುತ್ ಪ್ರವಹಿಸಿ ಯುವಕನೋರ್ವ ಮೃತಪಟ್ಟ ಘಟನೆ ಗಂಗೊಳ್ಳಿ ಸಮೀಪದ ನಾಯಕವಾಡಿ-ಗುಜ್ಜಾಡಿ ಎಂಬಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ಮೃತಪಟ್ಟ ಯುವಕನನ್ನು ನಾಯಕವಾಡಿ ನಿವಾಸಿ ಸುಜಯ್ (25) ಎಂದು ಗುರುತಿಸಲಾಗಿದೆ.ಘಟನೆ ವಿವರ: ನಾಯಕವಾಡಿ ಸಂಗಮೇಶ್ವರ ದೇವಸ್ಥಾನದ ದೀಪೋತ್ಸವ ಇದ್ದ ಕಾರಣ ನಾಯಕವಾಡಿ-ಗುಜ್ಜಾಡಿಯಲ್ಲಿರುವ ಪೊಲೀಸ್ ಚೆಕ್‌ಪೋಸ್ಟ್ ಎದುರು ಇರುವ ಮಾವಿನ ಮರದ ಮೇಲೆ ಮಾವಿನ ಎಲೆ ತೆಗೆಯಲು ಸುಜಯ್ ಮಾವಿನ ಮರವನ್ನು ಹತ್ತಿದ್ದಾನೆ.

ಮಾವಿನ ಮರದ ಮೇಲೆ ಮೆಸ್ಕಾಂ ಗಂಗೊಳ್ಳಿ ಉಪವಿದ್ಯುತ್ ಕೇಂದ್ರಕ್ಕೆ ವಿದ್ಯುತ್ ಸರಬರಾಜು ಮಾಡುವ ಎಚ್.ಟಿ ವಿದ್ಯುತ್ ತಂತಿ ಹಾದು ಹೋಗಿದ್ದು, ಮರದ ಗೆಲ್ಲು ಕಡಿಯುವ ಸಂದರ್ಭ ಮರದ ಗೆಲ್ಲು ವಿದ್ಯುತ್ ತಂತಿಗೆ ತಾಗಿದೆ ಎನ್ನಲಾಗಿದ್ದು, ವಿದ್ಯುತ್ ಪ್ರವಹಿಸಿ ಸುಜಯ್ ಗಂಭೀರವಾಗಿ ಗಾಯಗೊಂಡಿದ್ದರು. ಮರದ ಮೇಲೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಸುಜಯ್ ಅವರನ್ನು ಕೂಡಲೇ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net