ಬಾವಿಯಲ್ಲಿ ಮುಳುಗಿ ಯುವಕ ಸಾವು

Published on

ತೂಬಗೆರೆ: ಹೋಬಳಿಯ ಚಿಕ್ಕರಾಯಪ್ಪನಹಳ್ಳಿ ಕೆರೆ ಸಮೀಪದ ಬಾವಿಯಲ್ಲಿ ಮುಳುಗಿ ಯುವಕ ಮೃತಪಟ್ಟಿದ್ದಾನೆ. ತೂಬಗೆರೆ ಹೋಬಳಿ ಕರೇನಹಳ್ಳಿಯ ತೇಜಸ್​(22) ಮೃತ. ಭಾನುವಾರ ಮಧ್ಯಾಹ್ನ ದೊಡ್ಡಬಳ್ಳಾಪುರದಿಂದ ಬಂದಿದ್ದ 6 ಜನ ಸ್ನೇಹಿತರೊಂದಿಗೆ ಬಾವಿಯಲ್ಲಿ ಈಜಾಡಲು ತೇಜಸ್​ ಹೋಗಿದ್ದ. ಸುಮಾರು 15 ಆಳದ ಬಾವಿ ತಳದಲ್ಲಿ ಜೇಡಿಮಣ್ಣಿದ್ದು, ಮೇಲಿಂದ ಜಿಗಿದ ಕಾರಣ ನೀರಿನಾಳದ ಮಣ್ಣಿನಲ್ಲಿ ಸಿಲುಕಿದ್ದ ಎನ್ನಲಾಗಿದೆ. ಮೃತದೇಹವನ್ನು ಹೊರತೆಗೆಯಲಾಗಿದ್ದು, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net