

ಖಾನಾಪುರ: ತಾಲೂಕಿನ ದೆಮಿನಕೊಪ್ಪ ಗ್ರಾಮದ ಬಳಿ ಕೆರೆಯಲ್ಲಿ ಈಜಲು ಹೋಗಿ ಯುವಕನೋರ್ವ ಮುಳುಗಿ ಮೃತಪಟ್ಟ ಟನೆ ಭಾನುವಾರ ಸಂಭವಿಸಿದೆ.
ಹಳಿಯಾಳ ತಾಲೂಕಿನ ಕಂಚನೋಳಿ ಗ್ರಾಮದ ತರುಣ ಚಲವಾದಿ(21) ಮತಪಟ್ಟ ಯುವಕ. ಏ.7ರಿಂದ ಕೊಡಚವಾಡದಲ್ಲಿ ಕಲ್ಮೇಶ್ವರ ದೇವರ ಜಾತ್ರೆ ಜರುಗಲಿರುವುದರಿಂದ ತರುಣ ಚಿಕ್ಕಮ್ಮನ ಮನೆಗೆ ಬಂದಿದ್ದನು. ಭಾನುವಾರ ಬಟ್ಟೆ ಸ್ವಚ್ಛಗೊಳಿಸಲು ಕುಟುಂಬಸ್ಥರೊಂದಿಗೆ ಕೆರೆಗೆ ಆಗಮಿಸಿದ್ದನು. ಈ ವೇಳೆ ಈಜಲು ಕೆರೆಗೆ ಇಳಿದಿದ್ದಾನೆ. ಆದರೆ, ಈಜು ಬಾರದೇ ಮುಳುಗಿ ಮೃತಪಟ್ಟಿದ್ದಾನೆ. ನಂತರ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಶವ ಹೊರೆ ತೆಗೆಯಲಾಯಿತು. ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.