ವಿದ್ಯುತ್ ತಂತಿ ತಗುಲಿ ಯುವಕ ಮರಣ

New Power Cut
Published on

ನರಗುಂದ: ಆಡು ಮೇಯಿಸಲು ಹೋಗಿದ್ದ ಯುವಕ ವಿದ್ಯುತ್ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲೂಕಿನ ಸುರಕೋಡ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ. ಸುರಕೋಡದ ಸಂತೋಷ ಹನುಮಂತಪ್ಪ ಮಾದರ (22) ಮೃತ ದುರ್ದೈವಿ. ಎಂದಿನಂತೆ ಸಂತೋಷ ಆಡು ಮೇಯಿಸಲು ಹೋಗಿದ್ದ, ಸುರಕೋಡ ಹೊರವಲಯದ ವೀರನಗೌಡ ಮುದ್ದನಗೌಡ್ರ ಅವರ ಜಮೀನಿನ ಬದುವಿನ ಗಿಡದ ಕೆಳಗೆ ಆಡುಗಳನ್ನು ಮೇಯಿಸುತ್ತಿದ್ದ. ಈ ವೇಳೆ ಜೋರಾಗಿ ಬಿರುಗಾಳಿ ಬೀಸಿ ವಿದ್ಯುತ್ ತಂತಿ ತುಂಡಾಗಿ ಮರದ ಮೇಲೆ ಬಿದ್ದಿದೆ. ಬಳಿಕ ತಂತಿ ಕೈ-ಕಾಲುಗಳಿಗೆ ಸ್ಪರ್ಶಿಸಿದ ಪರಿಣಾಮ ಸಂತೋಷ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೃತನ ತಂದೆ ಹನುಮಂತಪ್ಪ ಮಾದರ ನರಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net