

ಗಂಗಾವತಿ (ಕೊಪ್ಪಳ): ನಗರದ ಪ್ರಶಾಂತ ನಗರ ಬಡಾವಣೆ ಗಣೇಶ ವಿಸರ್ಜನೆ ವೇಳೆ ಡಿಜೆ ಸದ್ದಿಗೆ ಕುಣಿಯುತ್ತಿದ್ದ ಯುವಕ ಕುಸಿದು ಬಿದ್ದು ಮೃತಪಟ್ಟಿದ್ದಾನೆ.
ನಗರದ ನಿವಾಸಿ ಸುದೀಪ್ ಸಜ್ಜನ(30) ಮೃತ ಯುವಕ. ಬಡಾವಣೆಯ 21ನೇ ದಿನದ ಗಣೇಶ ಮೂರ್ತಿ ವಿಸರ್ಜನೆಗೆ ಮಹಾರಾಷ್ಟ್ರ ಮೂಲದ ಡಿಜೆ ತರಲಾಗಿದೆ.
ಡಿಜೆ ಸದ್ದಿಗೆ ಯುವಕರು ಹುಚ್ಚೆದ್ದು ಕುಣಿದಿದ್ದಾರೆ. ಬೆಳಗ್ಗೆ 2 ಗಂಟೆ ಸುಮಾರಿಗೆ ಹೆಜ್ಜೆ ಹಾಕುತ್ತಿರುವಾಗಲೇ ಸಂದೀಪ್ ಕುಸಿದು ಬಿದ್ದಿದ್ದಾನೆ. ತಕ್ಷಣ ಜೊತೆಗಿದ್ದವರು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅಷ್ಟರಲ್ಲಾಗಲೇ ಯುವಕ ಮೃತನಾಗಿದ್ದಾನೆ.
ತಕ್ಷಣ ಪೊಲೀಸರು ಡಿಜೆ ಬಂದ್ ಮಾಡಿಸಿದ್ದಾರೆ. ಗಣೇಶ ವಿಸರ್ಜನಾ ಕಾರ್ಯ ಪೂರ್ಣಗೊಳಿಸಿದ್ದಾರೆ. ಹೃದಯಾಘಾತದಿಂದ ಯುವಕ ಸಾವನ್ನಪ್ಪಿದ್ದಾನೆನ್ನಲಾಗಿದೆ.