ಆಡು ಮರಿ ರಕ್ಷಿಸಲು ಹೋದ ಯುವಕ ಮೃತ್ಯು

railwaytrack
Published on

ಮಂಗಳೂರು: ಮೂಕಪ್ರಾಣಿಯ ಪ್ರಾಣ ಕಾಪಾಡಲು ಹೋಗಿ ರೈಲಿನಡಿ ಸಿಲುಕಿ ತನ್ನೆರಡು ಕಾಲುಗಳನ್ನು ಕಳೆದುಕೊಂಡಿದ್ದ ಗೋಲ್ಡನ್ ಬಸ್‌ನ ನಿರ್ವಾಹಕರಾಗಿದ್ದ ಚೇತನ್(21) ಭಾನುವಾರ ಮೃತಪಟ್ಟಿದ್ದಾರೆ.

ಎರಡು ತಿಂಗಳ ಹಿಂದೆ ಆಡಿನ ಮರಿಯೊಂದು ರೈಲು ಹಳಿಯುದ್ದಕ್ಕೂ ಓಡಾಡಿಕೊಂಡಿದ್ದನ್ನು ಕಂಡ ಚೇತನ್ ಅದನ್ನು ರಕ್ಷಿಸಲು ಮುಂದಾಗಿದ್ದರು. ಆಡನ್ನು ಹಳಿಯಿಂದ ಮೇಲೆತ್ತಿ ರಕ್ಷಿಸುವ ವೇಳೆ ರೈಲು ಅಪ್ಪಳಿಸಿದ್ದು, ಚೇತನ್ ಕಾಲಿನ ಮೇಲೆಯೇ ರೈಲು ಹರಿದು ಹೋಗಿತ್ತು. ಗಂಭೀರ ಗಾಯಗೊಂಡಿದ್ದ ಅವರನ್ನು ಮಂಗಳೂರಿನ ಆಸ್ವತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭ ಅವರನ್ನು ಉಳಿಸುವುದಕ್ಕಾಗಿ ಗೆಳೆಯರು ಬೀದಿ ಬದಿ ಹಣ ಸಂಗ್ರಹಿಸಿದಲ್ಲದೆ, ದಾನಿಗಳು ತಮ್ಮಿಂದಾದಷ್ಟು ಹಣ ನೀಡಿ ಸಹಕರಿಸಿದ್ದರು. ಸ್ವಲ್ಪ ಚೇತರಿಸಿಕೊಂಡ ಚೇತನ್ ಅವರನ್ನು ಡಿಸ್ಚಾರ್ಜ್ ಮಾಡಿ ಮನೆಗೆ ಕರೆತಂದಿದ್ದರು. ಮಾನಸಿಕವಾಗಿ ಕುಗ್ಗಿದ ಅವರು ಸರಿಯಾಗಿ ಆಹಾರವನ್ನೂ ಸೇವಿಸದೆ ಪುನಃ ಆಸ್ವತ್ರೆಗೆ ದಾಖಲಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net