ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಶುಕ್ರವಾರ ದೇರಳಕಟ್ಟೆಯ ಖಾಸಗಿ ಆಸ್ಪತೆಯಲ್ಲಿ ವೈದ್ಯರನ್ನು ಸಂದರ್ಶಿಸಿದ್ದರು. ವೈದ್ಯರು ಸೋಮವಾರ ಮತ್ತೆ ಬರುವಂತೆ ತಿಳಿಸಿದ್ದು, ಅದರಂತೆ ಬೆಳಗ್ಗೆ ಸ್ನೇಹಿತರಾದ ಪ್ರಕಾಶ್ ಕುಂಪಲ, ಶೈಲೇಶ್ ಮೊದಲಾದವರು ಉನ್ನತ ತಪಾಸಣೆಗೆ ಕೆಎಂಸಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆಸ್ಪತ್ರೆಯಲ್ಲಿ ತಪಾಸಣೆ ನಡೆಸುತ್ತಿದ್ದ ವೇಳೆ ಸ್ನೇಹಿತರ ಮುಂದೆಯೇ ರಾಜೇಶ್ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.