ಕಟ್ಟಿಗೆ ತರಲು ಕಾಡಿಗೆ ಹೋದ ಯುವಕನ ತಲೆ-ಕಾಲು ಬಿಟ್ಟು ಅರ್ಧ ದೇಹವನ್ನೇ ತಿಂದ ಸ್ಥಿತಿಯಲ್ಲಿ ಶವಪತ್ತೆ

Youth Dead body
Published on

ಗುಂಡ್ಲುಪೇಟೆ: ಬಂಡೀಪುರದಿಂದ ಕೇವಲ 4 ಕಿ.ಮೀ ದೂರದಲ್ಲಿರುವ ಕೇರಳದ ವಯನಾಡು ಜಿಲ್ಲೆಯ ಅರಣ್ಯಪ್ರದೇಶದಲ್ಲಿ ಯುವಕರೊಬ್ಬರ ಮೃತದೇಹ ಪತ್ತೆಯಾಗಿದ್ದು, ಇವರು ಹುಲಿ ದಾಳಿಯಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಕೇರಳದ ವೈನಾಡು ಜಿಲ್ಲೆಯ ಪುಲ್‌ಪಳ್ಳಿ ನಿವಾಸಿ ಶಿವಕುಮಾರ್‌ (23) ಮೃತ ದುರ್ದೈವಿ. ಕಟ್ಟಿಗೆ ಸಂಗ್ರಹಿಸಲು ಮಂಗಳವಾರ ಕಾಡಿಗೆ ತೆರಳಿದ್ದರು. ಇವರು ರಾತ್ರಿಯಾದರೂ ಮರಳದ ಹಿನ್ನೆಲೆಯಲ್ಲಿ, ಸ್ಥಳೀಯರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡಿನಲ್ಲಿ ಹುಡುಕಾಟ ನಡೆಸಿದಾಗ ಶಿವಕುಮಾರ್‌ ಅವರ ಮೃತ ದೇಹ  ಪತ್ತೆಯಾಗಿದೆ.

ಹುಲಿ ದಾಳಿಯಿಂದ ಅಥವಾ ಬೇರಾವ ಕಾರಣದಿಂದ ಸಾವನ್ನಪ್ಪಿದ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ ಬಾಲಚಂದ್ರ ತಿಳಿಸಿದರು. ಇದನ್ನೂ ಓದಿ: ಇಲ್ಲಿ ಪೆಟ್ರೋಲ್​ಗೆ ಕೇವಲ 25 ರೂಪಾಯಿ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net