ಯುವ ಸಂಸ್ಕೃತಿ ಸ್ನೇಹ ಮಿಲನ ಇಂದು

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಸ್ವಾಮಿ ವಿವೇಕಾನಂದ ಯೂತ್​ ಮೂವ್​ಮೆಂಟ್​ ವತಿಯಿಂದ ಜೂ. 15ರಂದು ಇಲ್ಲಿನ ಶಿವಾಜಿ ವೃತ್ತ ಬಳಿಯ ಕೆ.ಇ. ಬೋರ್ಡ್​ ಪದವಿ ಕಾಲೇಜು ಸಭಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ವಿದ್ಯಾರ್ಥಿಗಳ ಯುವ ಸಂಸ್ಕೃತಿ ಸ್ನೇಹ ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ.

ಯುಪ್ಲೆಕ್ಸ್​ ಲಿಮಿಟೆಡ್​ನ ಮಾನವ ಸಂಪನ್ಮೂಲ ವಿಭಾಗದ ಡಿಜಿಎಂ ಅರುಣ ಹೆಬ್ಳೀಕರ ಕಾರ್ಯಕ್ರಮ ಉದ್ಘಾಟಿಸುವರು. ರಾಮನಾಥ ಹೆಗಡೆ ಅತಿಥಿಯಾಗಿ ಆಗಮಿಸುವರು. ಸ್ವಾಮಿ ವಿವೇಕಾನಂದ ಯೂತ್​ ಮೂವ್​ಮೆಂಟ್​ ನಿರ್ವಹಣಾ ಸಮಿತಿ ಸದಸ್ಯ ಹರ್ಷವರ್ಧನ ಶೀಲವಂತ ಅಧ್ಯಕ್ಷತೆ ವಹಿಸಲಿದ್ದಾರೆ.

ನಂತರ ನಡೆಯುವ ಗೋಷ್ಠಿಯಲ್ಲಿ ಧಾರವಾಡದ ಐಐಟಿ ಡೀನ್​ ಪ್ರೊ. ಎಸ್​.ಎಂ. ಶಿವಪ್ರಸಾದ ಅವರು ಜೀವನದಲ್ಲಿ ಕಲಿಕೆಯ ಅವಕಾಶಗಳು ಕುರಿತು ಉಪನ್ಯಾಸ ನೀಡುವರು. ಮಧ್ಯಾಹ್ನ ಗುಂಪು ಚರ್ಚೆ, ಸಂವಾದ ನಡೆಯಲಿವೆ.

ಸ್ವಾಮಿ ವಿವೇಕಾನಂದ ಯೂತ್​ ಮೂವ್​ಮೆಂಟ್​ ಶಿಕ್ಷಣ ಕ್ಷೇತ್ರದ ಪ್ರಕಲ್ಪವಾದ ವಿವೇಕ ಸ್ಕಾಲರ್​ ಪ್ರೋಗ್ರಾಂ ಅಡಿ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ಮಕ್ಕಳಿಗೆ ಉಚಿತವಾಗಿ ಪಿಯುಸಿ ಶಿಕ್ಷಣ ನೀಡುತ್ತಿದೆ. 2018ರಿಂದ ಈವರೆಗೆ 250ಕ್ಕಿಂತ ಹೆಚ್ಚು ಮಕ್ಕಳು ಯೋಜನೆ ಲಾಭ ಪಡೆದಿದ್ದಾರೆ. ಈ ಎಲ್ಲ ಮಕ್ಕಳು ಸದ್ಯ ಇಂಜಿನಿಯರಿಂಗ್​, ಎಂಬಿಬಿಎಸ್​, ಬಿಎಸ್ಸಿ ಅಗ್ರಿ, ಇತರ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದು, ಈ ಅವಧಿಯಲ್ಲೂ ಅವರ ಶೈಕ್ಷಣಿಕ ಪ್ರಗತಿ ಆಧಾರದ ಮೇಲೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಇಂತಹ ಎಲ್ಲ ಮಕ್ಕಳನ್ನು ಒಂದೆಡೆ ಸೇರಿಸುವ ನಿಟ್ಟಿನಲ್ಲಿ ಸ್ನೇಹ ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net