ಕೋಣೆಯಲ್ಲಿ ಕೂಡಿಹಾಕಿ ಪಟಾಕಿ ಸ್ಫೋಟ, ಯುವಕ ಗಂಭೀರ

ಸಾಂಧರ್ಬಿಕ ಚಿತ್ರ
ಸಾಂಧರ್ಬಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು
  • ಸ್ನೇಹಿತನ ವಿರುದ್ಧ ದೂರು
ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಕೊಠಡಿಯೊಳಗೆ ಕೂಡಿ ಹಾಕಿ ಬಳಿಕ ಮಾಲೆ ಪಟಾಕಿ ಸ್ಫೋಟಿಸಲಾಗಿದ್ದು, ಇದರಿಂದ ಯುವಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು

ಮಲ್ಲ ಚೋಕೆಮೂಲೆ ನಿವಾಸಿ ಎಂ.ಅಭಿಲಾಷ್​(32) ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ನೇಹಿತನ ವಿರುದ್ಧ ದೂರು

ಏ.15ರಂದು ರಾತ್ರಿ 10ರಿಂದ 16ರಂದು ಬೆಳಗ್ಗೆ 8ಗಂಟೆ ಮಧ್ಯೆ ಮನೆ ಕೊಠಡಿಯೊಳಗೆ ಕೋಡಿ ಹಾಕಿ, ಬಳಿಕ ಮಾಲೆ ಪಟಾಕಿಗೆ ಬೆಂಕಿ ಹಚ್ಚಿ ಎಸೆದಿರುವುದಾಗಿ ಅಭಿಲಾಷ್​ ನೀಡಿದ ದೂರಿನನ್ವಯ ಸ್ನೇಹಿತನಾದ ಮುಳ್ಳೇರಿಯದ ಪ್ರಣವ್​ ಎಂಬಾತನ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net