

ರಾಯಚೂರು ಕೇಂದ್ರ ಸರ್ಕಾರದ ಪೆಟ್ರೋಲ್, ಡೀಸೆಲ್ ಹಾಗೂ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಮುಖಂಡರಿAದ ಬುಧವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಿಲಿಂಡರ್ ಹಿಡಿದು ಒಲೆ ಹಚ್ಚಿ ವಿನೂತನ ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವುದರ ಜತೆಗೆ ಬಡ ಜನರ ಗಾಯದ ಮೇಲೆ ಎಳೆಯುತ್ತಿದ್ದಾರೆಂದು ಆಕ್ರೋಶ ವ್ಯಕ್ತ ಪಡಿಸಿದರು. ಡೀಸೆಲ್, ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ ೨ ರೂ. ಹೆಚ್ಚಿಸಿದ್ದು, ಗ್ಯಾಸ್ ಸಿಲಿಂಡರ್ ಬೆಲೆ ೫೦ ರೂ ಹೆಚ್ಚಳ ಮಾಡಿದ್ದಾರೆ. ಅಚ್ಚೆದಿನ ಎಂದು ಕೆಟ್ಟ ದಿನಗಳಿಗೆ ಜನರನ್ನು ದೂಡುತ್ತಿರುವುದನ್ನು ಸರ್ಕಾರದ ವಿರುದ್ಧ ಆಕೆ ಹೊರ ಹಾಕಿದರು. ರಸ್ತೆ ಮಧ್ಯದಲ್ಲಿ ಸಿಲಿಂಡರ್ ಬದಿಗಿಟ್ಟು ಒಲೆ ಹಚ್ಚಿ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು.
ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಯು ರೈತರು, ದಿನಗೂಲಿ ಕಾರ್ಮಿಕರು ಮಧ್ಯಮ ವರ್ಗದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುತ್ತಿದೆ, ಕೇಂದ್ರ ಸರ್ಕಾರ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು, ಕೂಡಲೇ ಪೆಟ್ರೋಲ್, ಡೀಸೆಲ್, ಹಾಗೂ ಗ್ಯಾಸ್ ಸಿಲಿಂಡರ್ ಬೆಲೆ ಯಥಾಸ್ಥಿತಿ ತರಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ -ೆÊಸಲ್ ಖಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಹುಸೇನ್ ಬಾಷಾ, ಜಿಲ್ಲಾಧ್ಯಕ್ಷ ಮರಿಸ್ವಾಮಿ, ಉಪಾಧ್ಯಕ್ಷ ಪಿ.ಮಧು ಕುಮಾರ, ರಶೀದ್, ನಗರಾಧ್ಯಕ್ಷ ಮಹಮದ್ ಶಹೆಬಾಜ್, ಗ್ರಾಮೀಣ ಅಧ್ಯಕ್ಷ ಸಂತೋಷ ಕುಮಾರ, ಪ್ರವೀಣ ರೆಡ್ಡಿ ಗುಡ್ಸಿ, ರಾಬರ್ಟ್, ಶೇಕ್ ಬಾಬಾ, ದೇವರಾಜ, ಶಿವಮುರಗಲ್, ಮಹಮದ್ ಅಜೀಂ, ಸುರೇಶ, ವೀರೇಶ, ಮಹಮದ್ -Áರೂಕ್ ಸೇರಿದಂತೆ ಅನೇಕರು ಇದ್ದರು.