ಆ.15ರಂದು ಯುವ ಭಾರತ್​ ಸಾಂಸ್ಕೃತಿಕ ಸ್ಪರ್ಧೆ

deepak kotian congress
Published on

ಉಡುಪಿ: ಜಿಲ್ಲಾ ಯುವಕಾಂಗ್ರೆಸ್​ ಸಮಿತಿ ವತಿಯಿಂದ ಸ್ವಾತಂತ್ರೋತ್ಸವದ ಅಂಗವಾಗಿ ಬನ್ನಂಜೆಯ ನಾರಾಯಣಗುರು ಸಭಾಭವನದಲ್ಲಿ ಆ.15ರಂದು ಬೆಳಗ್ಗೆ 9.30ಕ್ಕೆ ಯುವ ಭಾರತ್​ ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಯುವಕಾಂಗ್ರೆಸ್​ ಜಿಲ್ಲಾಧ್ಯಕ್ಷ ದೀಪಕ್​ ಕೋಟ್ಯಾನ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮೂಹ ಸಂಗೀತ ಸ್ಪರ್ಧೆ, ಸಮೂಹ ನೃತ್ಯ ಸ್ಪರ್ಧೆ, ಪ್ರಹಸನ ನಡೆಯಲಿದೆ. ಒಟ್ಟು 10 ಬ್ಲಾಕ್​ಗಳಿಂದ 10 ತಂಡಗಳು ಭಾಗವಹಿಸಲಿವೆ. ಪ್ರತಿ ವಿಭಾಗದಲ್ಲಿ 10 ಸಾವಿರ ರೂ.ಪ್ರಥಮ ಬಹುಮಾನ, ದ್ವೀತಿಯ 5 ಸಾವಿರ ರೂ. ನೀಡಲಾಗುತ್ತಿದ್ದು, ಚಾಂಪಿಯನ್​ ತಂಡಗಳಿಗೆ 50 ಸಾವಿರ ರೂ.ಪ್ರಥಮ, 25 ಸಾವಿರ ರೂ.ದ್ವೀತಿಯ ಹಾಗೂ 15 ಸಾವಿರ ರೂ.ತೃತೀಯ ಬಹುಮಾನ ಲಭಿಸಲಿದೆ ಎಂದರು.

ಕಾರ್ಯಕ್ರಮವನ್ನು ಬೆಳಗ್ಗೆ 9.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷಿ ಹೆಬ್ಬಾಳ್ಕರ್​ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ವಿನಯ ಕುಮಾರ್​ ಸೊರಕೆ, ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಅಶೋಕ್​ ಕುಮಾರ್​ ಕೊಡವೂರು ಉಪಸ್ಥಿತರಿರಲಿದ್ದಾರೆ. ಸಾಯಂಕಾಲ 4ಕ್ಕೆ ಸಮಾರೋಪದಲ್ಲಿ ಕರ್ನಾಟಕ ಯುವ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ಮೊಹಮ್ಮದ್​ ಹ್ಯಾರಿಸ್​ ನಲಪಾಡ್​, ಎಐಸಿಸಿ ಸಾಮಾಜಿಕ ಜಾಲತಾಣದ ಸಂಯೋಜಕಿ ಭವ್ಯಾ ನರಸಿಂಹಮೂರ್ತಿ ಭಾಗವಹಿಸಲಿದ್ದಾರೆ ಎಂದರು.

ಯೂತ್​ ಕಾಂಗ್ರೆಸ್​ ಉಪಾಧ್ಯಕ್ಷೆ ಸುರಯ್ಯ ಅಂಜುಮ್​, ಕಾಪು ಬ್ಲಾಕ್​ ಯುವ ಕಾಂಗ್ರೆಸ್​ ಸಮಿತಿ ಉಸ್ತುವಾರಿ ಶಬರೀಶ್​ ಸುವರ್ಣ, ಉಡುಪಿ ಬ್ಲಾಕ್​ ಯುವ ಕಾಂಗ್ರೆಸ್​ ಸಮಿತಿ ಅಧ್ಯಕ್ಷ ರವಿರಾಜ್​ ರಾವ್​, ಜಿಲ್ಲಾ ಯುವ ಕಾಂಗ್ರೆಸ್​ ಸಮಿತಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್​ ನಿಯಾಝ್​, ಪ್ರೀತಿ ಜೆ.ಸಾಲಿನ್ಸ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net