

ರಾಯಚೂರು ಕಾಶ್ಮೀರದ ಪಹಲ್ಗಾಮ್ ಬಳಿ ಪ್ರವಾಸಿಗರ ಮೇಲೆ ನಡೆದ ಗುಂಡಿನ ದಾಳಿ ಖಂಡನೀಯವಾಗಿದ್ದು, ದಾಳಿಗೆ ಕಾರಣ ಕೇಂದ್ರ ಸರ್ಕಾರದ ಭದ್ರತಾ ವೈ-Àಲ್ಯವಾಗಿದೆಂದು ಆರೋಪಿಸಿ ಜಿಲ್ಲಾ ಯೂತ್ ಕಾಂಗ್ರೆಸ್‌ನ ಪದಾಽಕಾರಿಗಳು ಬುಧವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಮಾಡಿದರು.
ಕಾಶ್ಮೀರದಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ೨೦ಕ್ಕೂ ಅಽಕ ಜನರು ಮೃತಪಟ್ಟಿದ್ದು ಕೇಂದ್ರ ಸರ್ಕಾರದ ಭದ್ರತಾ ವೈ-Àಲ್ಯವನ್ನು ಖಂಡಿಸಿದರು ಭದ್ರತೆಯಲ್ಲಿ ವಿ-Àಲವಾಗಿದ್ದರಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸವಿವ ರಾಜನಾಥ್ ಸಿಂಗ್ ರಾಜೀನಾಮೆಗೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಯೂತ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ -Àಜಲ್ ಖಾನ್ ಮಾತನಾಡಿ, ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ೨೬ ಜನರು ಮೃತಪಟ್ಟಿದ್ದು, ಇದಕ್ಕೆ ಕೇಂದ್ರ ಸರ್ಕಾರವೇ ನೇರವಾಗಿ ಹೊಣೆಯಾಗಿದೆ, ದೇಶದ ಜನರಿಗೆ, ಸಾರ್ವಜನಿಕರಿಗೆ ಕೇಂದ್ರ ಸರ್ಕಾರದ ಭದ್ರತಾ ನೀಡುವಲ್ಲಿ ವೈ-Àಲ್ಯವಾಗಿದೆ, ಗುಪ್ತಚರ ಇಲಾಖೆ ಸಂಪೂರ್ಣ ವಿ-Àಲವಾಗಿದ್ದರಿಂದ ಉಗ್ರರು ದಾಳಿ ನಡೆಸುವಂತಾಗಿದೆ ಎಂದು ಆಪಾದಿಸಿದರು.
ಕಾಶ್ಮೀರದಲ್ಲಿ ೩೭೦ ಹಿಂಪಡೆದಿದ್ದರಿAದ ಯಾವುದೇ ರೀತಿಯ ಘಟನೆಗಳು ನಡೆಯುತ್ತಿಲ್ಲವೆಂದು ಇದೀಗ ಉಗ್ರರ ದಾಳಿ ನಡೆಸಿದ್ದು, ಕೇಂದ್ರ ಸರ್ಕಾರದ ಸಂಪೂರ್ಣ ವಿ-Àಲವಾಗಿದೆ ಎಂದು ದೂರಿದರು. ಕೇಂದ್ರ ಸರ್ಕಾರದ ಗೃಹ ಸಚಿವ ಅಮಿತ್ ಶಾ ರಕ್ಷಣಾ ಸಚಿವ ರಾಜನಾಥ ಸಿಂಗ್ ರಾಜೀನಾಮೆಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ಹುಸೇನ್ ಬಾಷಾ, ಸೈವಾಜ್, ಗೌಸ್, ಮಹಮ್ಮದ್ ಅನೀ-ï, ಖಾಜಾ ಅಸ್ಲಂ, ಮಹ್ಮದ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.