ಮಾಜಿ ಸಂಸದ ಪ್ರತಾಪ ಸಿಂಹ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ

congress protest
ಮಾಜಿ ಸಂಸದ ಪ್ರತಾಪ ಸಿಂಹ ವಿರುದ್ಧ ಯುವ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐ ಕಾರ್ಯಕರ್ತರು ಶಿವಮೊಗ್ಗ ಬಾಲರಾಜ್ ಅರಸ್ ರಸ್ತೆಯ ಕೇಂದ್ರ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಹರ್ಷಿತ್ ಗೌಡ, ವಿಜಯ್‌ಕುಮಾರ್, ಆಸ್ಿ, ಚೇತನ್, ಮಧುಸೂದನ್, ಎಚ್.ಪಿ.ಗಿರೀಶ್, ಚರಣ್ ಶೆಟ್ಟಿ, ಪ್ರವೀಣ್‌ಕುಮಾರ್, ವಿಜಯ್, ಶಿವಕುಮಾರ್, ಅನಿಲ್ ಪಾಟೀಲ್ ಇದ್ದರು.
Published on

ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಅನ್‌ಪಡ್ ಎಂದು ಅವಮಾನಿಸಿರುವ ಮಾಜಿ ಸಂಸದ ಪ್ರತಾಪ ಸಿಂಹ ಅವರಿಗೆ ಹುಚ್ಚು ಹಿಡಿದಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕೆಂದು ಆಗ್ರಹಿಸಿ ಯುವ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐ ಕಾರ್ಯಕರ್ತರು ಗುರುವಾರ ನಗರದ ಕೇಂದ್ರ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಾಪಸಿಂಹ ಈ ದೇಶದ ಸಂವಿಧಾನ ವ್ಯವಸ್ಥೆಯ ಬಗ್ಗೆ ತಿಳಿದುಕೊಂಡಿರಬೇಕಿತ್ತು. ಆದರೆ ಜನರಿಂದ ಆಯ್ಕೆಯಾಗಿ ಶಿಕ್ಷಣ ಸಚಿವರನ್ನು ಅಣಕಿಸುವ ಕೆಲಸ ಮಾಡಿದ್ದಾರೆ. ಇಂತಹ ವ್ಯಕ್ತಿ ಸಾರ್ವಜನಿಕ ಕ್ಷೇತ್ರದಲ್ಲಿರುವುದಕ್ಕೆ ಅರ್ಹನಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಪತ್ರ ಬರೆದು ಪೋಸ್ಟ್ ಮಾಡಿದರು.

ಬಿಜೆಪಿಯಿಂದ ಟಿಕೆಟ್ ವಂಚಿತರಾದ ಪ್ರತಾಪ್ ಸಿಂಹ ಬೇಕಾಬಿಟ್ಟಿಯಾಗಿ ನಾಲಿಗೆ ಹರಿಬಿಡುತ್ತಿದ್ದಾರೆ. ಈ ದೇಶದ ಸಂವಿಧಾನದಲ್ಲಿರುವ ಅವಕಾಶದಿಂದ ಮಧು ಬಂಗಾರಪ್ಪ ಅವರು ಶಾಸಕರಾಗಿ, ಶಿಕ್ಷಣ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಶಿಕ್ಷಣ ಸಚಿವರಾದ ಮೇಲೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯ ಲಿತಾಂಶದಲ್ಲಿ ಆಗಿರುವ ಗಣನೀಯ ಹೆಚ್ಚಳವೇ ಅವರ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ. ಆದರೆ, ಪ್ರತಾಪಸಿಂಹ ಅಧಿಕಾರದಲ್ಲಿದ್ದಾಗ ಮಾಡಿಕೊಂಡಂತಹ ಅವಾಂತರಗಳು ಏನೇನು ಎನ್ನುವುದು ಇಡೀ ಜಗತ್ತಿಗೆ ಗೊತ್ತಿದೆ. ರಾಜಕೀಯವಾಗಿ ನಿರಾಶ್ರಿತನಾಗಿ ಹುಚ್ಚುಚ್ಚಾಗಿ ಹೇಳಿಕೆ ನೀಡುತ್ತಿರುವ ಅವರು ಕೂಡಲೇ ಮಧು ಬಂಗಾರಪ್ಪ ಮತ್ತು ಈ ನಾಡಿನ ಜನತೆಯ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಪ್ರತಾಪ ಸಿಂಹ ಅವರ ಮುಖವಾಡ ಧರಿಸಿದ್ದ ವ್ಯಕ್ತಿಯನ್ನು ಆಂಬುಲೆನ್ಸ್ ಮೂಲಕ ಆಸ್ಪತೆಗೆ ಸಾಗಿಸುವ ಅಣಕಿಸಿದರು. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರ್ಷಿತ್ ಗೌಡ, ಹಾಪ್ ಕಾಮ್ಸ್ ಅಧ್ಯಕ್ಷ ವಿಜಯ್‌ಕುಮಾರ್, ಪ್ರಮುಖರಾದ ಆಸ್ಿ, ಚೇತನ್, ಮಧುಸೂದನ್, ಎಚ್.ಪಿ.ಗಿರೀಶ್, ಚರಣ್ ಶೆಟ್ಟಿ, ಪ್ರವೀಣ್‌ಕುಮಾರ್, ಸಕ್ಲೇನ್, ಪ್ರವೀಣ್, ಗಿರೀಶ್, ಶಶಿಕುಮಾರ್, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಜಯ್, ಶಿವಕುಮಾರ್, ಅನಿಲ್ ಪಾಟೀಲ್, ನಿಖಿಲ್, ನೂರ್ ಅಹ್ಮದ್, ಅಶೋಕ್, ಧನರಾಜ್, ಪುರಲೆ ಬಾಬು, ಅನಂತ್, ರವಿ ಕಟಿಕೆರೆ, ಗೌತಮ್, ಚಂದ್ರಾಜಿ, ವರುಣ್, ತೌಫಿಕ್, ಅಶೋಕ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net