ಯೂತ್ ಕಾಂಗ್ರೆಸ್‌ನಿಂದ ಲೇಖನಿ ಸಾಮಾಗ್ರಿ ವಿತರಣೆ

Published on

ಚಿಂತಾಮಣಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹುಟ್ಟು ಹಬ್ಬದ ಅಂಗವಾಗಿ ಯೂತ್ ಕಾಂಗ್ರೆಸ್‌ನ ತಾಲೂಕು ಅಧ್ಯಕ್ಷ ಸಾಯಿನಾಥ್ ಚಿಂತಾಮಣಿ ನಗರದ ಟ್ಯಾಂಕ್ ಬಂಡ್ ರಸ್ತೆಯಲ್ಲಿರುವ ಶಿಲ್ಪಾ ಶಾಲೆಯಲ್ಲಿ ಮಕ್ಕಳಿಗೆ ಲೇಖನ ಸಾಮಗ್ರಿ, ಬೆಳಗ್ಗಿನ ಉಪಾಹಾರ ವಿತರಿಸಲಾಯಿತು.

ಸಾಯಿನಾಥ್ ಮಾತನಾಡಿ, ಕೇಂದ್ರ ವಿಪಕ್ಷ ನಾಯಕ ರಾಹುಲ್ ಗಾಂಧಿಗೆ ಶುಭಕೋರಿ, ಮುಂಬರುವ ದಿನಗಳಲ್ಲಿ ಆರೋಗ್ಯವಾಗಿರುವಂತೆ ಆಶಿಸಿದರು.

ನಗರ ಬ್ಲಾಕ್ ಅಧ್ಯಕ್ಷ ಭಾರತ್ ಕುಮಾರ್, ತಾಲೂಕು ಮೈನಾರಿಟಿ ಉಪಾಧ್ಯಕ್ಷ ಇಸಾಕ್ ಖಾನ್, ಜಿಮ್‌ನಾಗ, ಅಜಯ್, ವೆಂಕಟೇಶ್, ಲಕ್ಷ್ಮೀಪತಿ, ರಾಜು, ಆನಂದ, ತುಳಸಿ, ಸುನೀಲ್, ಶರತ್ ಮತ್ತು ಮಹೇಶ್, ಪ್ರಾಧ್ಯಾಪಕ, ಶಿಕ್ಷಕರು, ಶಾಲಾ ಆಡಳಿತ ಮಂಡಳಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net