

ಹುಬ್ಬಳ್ಳಿ: ಧಾರವಾಡದ ಸತ್ತೂರ ಶ್ರೀ ಬಸವೇಶ್ವರ ರೂರಲ್ ಎಜುಕೇಷನ್ ಆ್ಯಂಡ್ ಡೆವಲಪಮೆಂಟ್ ಟ್ರಸ್ಟ್‌ನ ರೂರಲ್ ಬಿ.ಇಡಿ ಕಾಲೇಜು, ಶ್ರೀ ಸತ್ಯ ಸಾಯಿ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜ್, ಹಾಸ್ಪಿಟಲ್, ವಿ.ಎಚ್. ಮರದ ಎಂ.ಇಡಿ ಕಾಲೇಜು, ಬಸವೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಮತ್ತು ಯಂಗ್ ಇಂಡಿಯಾ ವತಿಯಿಂದ ಭವಿಷ್ಯದ ಯುವಶಕ್ತಿ ಕುರಿತು ಸಮಾವೇಶ ಏರ್ಪಡಿಸಲಾಗಿತ್ತು.
ಅತಿಥಿಯಾಗಿದ್ದ ಟ್ರಸ್ಟ್ ಕಾರ್ಯದಶಿರ್ ಡಾ. ಶರಣಪ್ಪ ಕೋಟಗಿ ಅವರು, ಭಾರತದಲ್ಲಿ ಇತರ ದೇಶಗಳಿಗಿಂತ ಯುವಕರ ಸಂಖ್ಯೆ ಹೆಚ್ಚಾಗಿದೆ. ಸ್ವಾಮಿ ವಿವೇಕಾನಂದರು ಹೇಳಿದಂತೆ ಯುವ ಶಕ್ತಿ ಜಾಗೃತವಾದರೆ ಭಾರತವು ಇಡೀ ಜಗತ್ತನ್ನೇ ಆಳಬಹುದು ಎಂದರು.
ಪ್ರಮುಖ 5 ವಿಷಯಗಳ ಮೇಲೆ ನುರಿತ ತಜ್ಞರು ಮತ್ತು ಉದ್ಯಮಿಗಳು ಉಪನ್ಯಾಸ ನೀಡಿದರು. ವಿದ್ಯಾಥಿರ್ಗಳ ಅನಿಸಿಕೆ ಪಡೆದು ಪ್ರಶಸ್ತಿ ಪ್ರದಾನ ಮಾಡಿದರು.
ಯಂಗ್ ಇಂಡಿಯಾ ಸದಸ್ಯರಾದ ಅಭಿಷೇಕ ಮಾಂಡೆ, ಗುರುರಾಜ ವಾಸನ, ಸ್ಪೂತಿರ್ ಕಬ್ಬೂರ, ನಾಗರಾಜ ಕೊಟಗಿ, ಉಜ್ವಲ್ ಸಿಂಘಿ, ಚಿರಾಗ್ ಕಟಾರಿಯಾ ಅವರು ಉಪನ್ಯಾಸ ನಿಡಿದರು.
ಸಂಯೋಜಕ ಡಾ. ನಾಗರಾಜ್ ನಾಯ್ಕ್, ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಡಾ. ಮಹಾಂತೇಶ ಹಿರೇಮಠ, ಡಾ. ಸರೋಜಿನಿ ದೇಸಾಯಿ, ಡಾ. ಕಿರಣ ಸಾಣಿಕೊಪ್ಪ, ನವೀನ ಕರೇರ್, ಡಾ. ವಾಸಿಮ್ ಅಕ್ರಮ್, ವಿದ್ಯಾಥಿರ್ಗಳು ಭಾಗವಹಿಸಿದ್ದರು.