ಹಣಕಾಸಿನ ಮುಗ್ಗಟ್ಟಿನಿಂದ ಯುವಕ ಆತ್ಮಹತ್ಯೆ

maruti
ಮಾರುತಿ
Published on

ಮೂಲ್ಕಿ: ಇಲ್ಲಿಗೆ ಸಮೀಪದ ಕೆ.ಎಸ್.ರಾವ್ ನಗರ ಲಿಂಗಪ್ಪಯ್ಯ ಕಾಡು, ನಾಗಬನದ ಬಳಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತ ಯುವಕನನ್ನು ಸ್ಥಳಿಯ ನಿವಾಸಿ ಮಾರುತಿ ಬಾಬು ಡೊಂಬರ (22) ಎಂದು ಗುರುತಿಸಲಾಗಿದೆ. ಈತ ಪಣಂಬೂರು ಹಾರ್ಬರ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಹಣಕಾಸಿನ ಮುಗ್ಗಟ್ಟಿನಿಂದ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಪಕ್ಕಾಸಿಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಯುವಕ ಅವಿವಾಹಿತನಾಗಿದ್ದು, ಅತ್ತಿಗೆ ಮತ್ತು ತಾಯಿಯನ್ನು ಅಗಲಿದ್ದಾನೆ. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net