ಖಿನ್ನತೆಯಿಂದ ಯುವಕ ಆತ್ಮಹತ್ಯೆ

BIRUR kumar
ಕುಮಾರ್
Published on

ಬೀರೂರು: ಪಟ್ಟಣದ ಸರಸ್ವತಿಪುರಂ ಬಡಾವಣೆಯಲ್ಲಿ ಕುಟುಂಬದ ಪರಿಸ್ಥಿತಿಯಿಂದ ಮನನೊಂದು ಕುಮಾರ (23) ಎಂಬಾತ ಶನಿವಾರ ರಾತ್ರಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೊಗರೇಹಳ್ಳಿ ತಿಮ್ಮಪ್ಪ ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರಿದ್ದರು. ಪತ್ನಿ 10 ವರ್ಷಗಳ ಹಿಂದೆ ಮೃತಪಟ್ಟಿದ್ದರೆ, ಕಳೆದ ವರ್ಷ ಪುತ್ರ ಸಿದ್ದೇಶ ಅನಾರೋಗ್ಯದಿಂದ ಮೃತಪಟ್ಟಿದ್ದ. ಇದರಿಂದ ಮನನೊಂದ ತಿಮ್ಮಪ್ಪ ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ಅವರ ದ್ವಿತೀಯ ಪುತ್ರ ಕುಮಾರ್ ಕೂಡ ಕುಟುಂಬದ ಪರಿಸ್ಥಿತಿಯಿಂದ ಬೇಸರಗೊಂಡಿದ್ದ. ಸ್ನೇಹಿತ ಪ್ರತಾಪ್ ಎಂಬುವರ ಜತೆ ್ಲಂಬಿಂಗ್ ಕೆಲಸ ಮಾಡಿಕೊಂಡಿದ್ದ. ಇತ್ತೀಚೆಗೆ ತಂದೆಯ ಅನಾರೋಗ್ಯ ಕಂಡು ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಕುಮಾರ್ ಶನಿವಾರ ರಾತ್ರಿ ಮನೆಯ ಮೇಲ್ಛಾವಣಿಯ ಕಬ್ಬಿಣದ ಹ್ಯಾಂಗ್ಲರ್‌ಗೆ ಟವಲ್‌ನಿಂದ ನೇಣು ಬಿಗಿದುಕೊಂಡಿದ್ದ. ಒದ್ದಾಡುವ ಶಬ್ದ ಕೇಳಿ ಹಿಂದಿನ ಮನೆಯ ಮಂಜುನಾಥ, ಕಿರಣ ಮತ್ತು ರುದ್ರೇಶ ಅವರು ಬಂದು ನೋಡಿ ಬಾಗಿಲನ್ನು ಒಡೆದು ಆತನನ್ನು ನೇಣಿನಿಂದ ಇಳಿಸಿ ಬೈಕ್‌ನಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಅಷ್ಟರಲ್ಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಸಂಬಂಧಿಕ ರಂಗಸ್ವಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net