

ಮೈಸೂರು: ಮೈಮೇಲೆ ದೆವ್ವ ಬರುತ್ತಿದೆ ಅನ್ನುತ್ತಿದ್ದ ಯುವಕನೊಬ್ಬ ಬುಧವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಾಲೂಕಿನ ಮಾರ್ಬಳ್ಳಿ ಗ್ರಾಮದ ವೃಷಭೇಂದ್ರ (21) ಆತ್ಮಹತ್ಯೆಗೆ ಶರಣಾದ ಯುವಕ. ಬೆಮೆಲ್ ಬಡಾವಣೆಯ ಗಣಪತಿ ದೇವಸ್ಥಾ ನದ ಬಳಿಯ ಉದ್ಯಾನದಲ್ಲಿ ಇರುವ ಮರಕ್ಕೆ ವೃಷಭೇಂದ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನನ್ನ ದೆವ್ವ ಬರುತ್ತಿದೆ ಎಂದು ನಾಲ್ಕು ವರ್ಷಗಳಿಂದ ವೃಷಭೇಂದ್ರ ಹೇಳುತ್ತಿದ್ದ. ಆತನಿಗೆ ಕುಟುಂಬದವರು ಮನೋವೈದ್ಯರ ಬಳಿ ಚಿಕಿತ್ಸೆ ಕೊಡಿಸುತ್ತಿದ್ದರು. ಮಂಗಳವಾರ ಮಾರ್ಬಳ್ಳಿಯಿಂದ ದೂರ ಗ್ರಾಮದಲ್ಲಿರುವ ಅಜ್ಜಿ ಮನೆಗೆ ಹೋಗಿ ಬರುತ್ತೇನೆ ಎಂದು ಹೊರಟ ವೃಷಭೇಂದ್ರ ಬುಧವಾರ ಬೆಳಗ್ಗೆ ಬೆಮೆಲ್ ಬಡಾವಣೆಯ ಉದ್ಯಾನದಲ್ಲಿ ಆತ್ಮಹತ್ಯೆಗೆ ಶರಣಾದ. ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.