ಜಮಖಂಡಿಯಲ್ಲಿ ಯುವಕರ ಸಂಭ್ರಮ

Youth celebration in Jamkhandi
ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ಜಮಖಂಡಿ ನಗರದಲ್ಲಿ ಯುವಕರು ಸಿಹಿ ಹಂಚಿ ಸಂಭ್ರಮಿಸಿದರು.
Published on

ಜಮಖಂಡಿ: ಚಂದ್ರಯಾನ-3 ಯಶಸ್ವಿಯಾಗುತ್ತಿದ್ದಂತೆ ನಗರದಲ್ಲಿ ಯುವಕರು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಸಮಿತಿ ಅಧ್ಯಕ್ಷ ಅಬುಬಕರ್ ಕುಡಚಿ ಮಾತನಾಡಿ, ದೇಶದ ನಮ್ಮ ಹೆಮ್ಮೆಯ ವಿಜ್ಞಾನಿಗಳ ಶ್ರಮದಿಂದ ಇತಿಹಾಸ ಸೃಷ್ಟಿಯಾಗಿದೆ. ವಿಜ್ಞಾನಿಗಳು ನಮ್ಮ ದೇಶದ ಆಸ್ತಿ ಎಂದರು.

ಚಂದ್ರಯಾನ-3 ಯಶಸ್ವಿಯಿಂದಾಗಿ ಇಡಿ ಪ್ರಪಂಚವೇ ನಮ್ಮ ದೇಶದ ಸಾಮರ್ಥ್ಯ ಹಾಗೂ ವಿಜ್ಞಾನಿಗಳ ಅಗಾಧ ಜ್ಞಾನ ಕೊಂಡಾಡುವಂತಾಗಿದೆ ಎಂದರು.
ಹಿಂದಿನ ಪ್ರಧಾನಿ ದಿ. ಜವಾಹರಲಾಲ ನೆಹರು ಅವರು ಸ್ಥಾಪಿಸಿದ ಬಾಹಾಕ್ಯಾಶ ಸಂಸ್ಥೆಯ ವಿಜ್ಞಾನಿಗಳ ಕಾರ್ಯ ಸದಾ ಸ್ಮರಣೀಯವಾಗಿದೆ ಎಂದರು.

ಯುವಕರು ರಾಷ್ಟ್ರಧ್ವಜ ಹಿಡಿದು ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

ಕಿರಣಕುಮಾರ ಖವಟಕೊಪ್ಪ, ಆನಂದ ನಂದಗಾಂವ, ಅಕ್ಬರ್ ಜಮಾದಾರ, ಅಲ್ಲಾಭಕ್ಷ ಆಗಾಖಾನ, ಸಾಜೀದ ಮೋಮಿನ್, ಬಬಲು ಶೇಖ, ರಮೇಶಚಂದ ಜೈನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net