ಹುಡುಗಿಯರನ್ನು ಪೀಡಿಸುತ್ತಿದ್ದ ಅಂತ ಠಾಣೆ ಎದುರೇ ಯುವಕನ ಮೇಲೆ ಹಲ್ಲೆ!

devdurga
Published on

ರಾಯಚೂರು: ಪೊಲೀಸ್ ಠಾಣೆಯ ಮುಂದೆಯೇ ಯುವಕನೊಬ್ಬನ ಮೇಲೆ ಹಲ್ಲೆ ನಡೆದಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದಲ್ಲಿ ನಡೆದಿದೆ. ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ತಾಲೂಕಿನ ಚಿಕ್ಕಬೂದೂರು ಗ್ರಾಮದ ಪ್ರಭು ಹಲ್ಲೆಗೊಳಗಾದ ಯುವಕ.

ಕುಡಿದ ಅಮಲಿನಲ್ಲಿ ಹೆಣ್ಣು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಅಂತ ಸರ್ಕಲ್ ಇನ್​​ಸ್ಪೆಕ್ಟರ್​ ಕಚೇರಿ ಆವರಣದಲ್ಲೇ ಚಿಕ್ಕಬೂದೂರು ಗ್ರಾಮದ 6 ಜನರು ಹಲ್ಲೆ ಮಾಡಿದ್ದಾರೆ. ಠಾಣೆಯ ಮುಂದೆಯೇ ಗಲಾಟೆ ನಡೆದಿದ್ದರೂ ಯುವಕನನ್ನು ರಕ್ಷಣೆ ಮಾಡಲು ಪೊಲೀಸರು ಮುಂದಾಗಿಲ್ಲ. ನಂತರ ಜನ ಜಮಾಯಿಸುತ್ತಿದ್ದಂತೆ ಎಚ್ಚೆತ್ತು ಹಲ್ಲೆ ಮಾಡುತ್ತಿದ್ದವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಗಾಯಾಳು ಯುವಕ ಸದ್ಯ ದೇವದುರ್ಗ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆಯ ಹಿನ್ನೆಲೆಯಲ್ಲಿ 6 ಜನರ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಆರೋಪಿಗಳಾದ ಉಮಾಪತಿ, ಮಲ್ಲಿಕಾರ್ಜುನ, ವೆಂಕಟರೆಡ್ಡಿ, ಚಂದ್ರಶೇಖರ್, ಪ್ರಕಾಶ್ ಹಾಗೂ ಸುರೇಶ್‍ರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net