

ಶಿವಮೊಗ್ಗ: ಸಾಗರ ತಾಲೂಕಿನ ಕುಂಬಾರಗುಂಡಿಯ ಒಂಟಿ ಮನೆಯಲ್ಲಿ ಮಹಿಳೆಗೆ ಚಾಕು ತೋರಿಸಿ ಬೆದರಿಸಿ ಚಿನ್ನಾಭರಣ, ಮೊಬೈಲ್ ಮತ್ತು ಪರ್ಸ್ ದರೋಡೆ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದು 2.78 ಲಕ್ಷ ರೂ. ಮೌಭಲ್ಯದ 39.94 ಗ್ರಾಂ ಬಂಗಾರದ ಮಾಂಗಲ್ಯಸರ ಮತ್ತು ಚಾಕು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಕೆಂಚನಗುಪ್ಪೆಯ ಎಚ್.ಎಸ್.ಪವನ್(26). ನ.12ರಂದು ಸಾಗರ ತಾಲೂಕಿನ ಕಲ್ಮನೆ ಗ್ರಾಮದ ಕುಂಬಾರಗುಂಡಿಯ ಒಂಟಿ ಮನೆಗೆ ನುಗ್ಗಿದ್ದ ಪವನ್, ಮಹಿಳೆಗೆ ಬೆದರಿಸಿ ದರೋಡೆ ಮಾಡಿದ್ದ.
ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಮಾರ್ಗದರ್ಶನದಲ್ಲಿ ಸಾಗರ ಡಿವೈಎಸ್‌ಪಿ ಟಿ.ಗೋಪಾಲಕೃಷ್ಣ ನಾಯ್ಕ ಮೇಲ್ವಿಚಾರಣೆಯಲ್ಲಿ ಸಾಗರ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಮಹಾಬಲೇಶ್ವರ ನಾಯಕ್ ನೇತೃತ್ವದ ಸಿಬ್ಬಂದಿಗಳಾದ ಶೇಖ್ ಫೈರೋಜ್ ಅಹಮ್ಮದ್, ಸನಾವುಲ್ಲಾ, ರವಿಕುಮಾರ್, ಹನುಮಂತ ಜಂಬೂರ್, ನಂದೀಶ್, ಪ್ರವೀಣ್‌ಕುಮಾರ್, ಗಿರೀಶ್ ಬಾಬು ಹಾಗೂ ಎಸ್‌ಪಿ ಕಚೇರಿ ತಾಂತ್ರಿಕ ಸಿಬ್ಬಂದಿಗಳಾದ ಗುರುರಾಜ, ಇಂದ್ರೇಶ್ ಮತ್ತು ವಿಜಯ್ಕುಮಾರ್ ಅವರನ್ನೊಳಗೊಂಡ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.