ಯುವಜನರ ಮೇಲಿದೆ ಭಾರತೀಯ ಸಂಸತಿ ಉಳಿವು

9ITAGI1
Published on

ಇಟಗಿ: ಗುರು&ಹಿರಿಯರನ್ನು ಗೌರವಿಸುವ ಮೂಲಕ ನಮ್ಮ ಭಾರತೀಯ ಸಂಸತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.

ಸಮೀಪದ ಬಿಳಕಿ&ಅವರೊಳ್ಳಿ ಗ್ರಾಮದಲ್ಲಿ ಈಚೆಗೆ ಆಯೋಜಿಸಿದ್ದ ಹಿರಿಯರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಆಧುನಿಕತೆ ನೆಪದಲ್ಲಿ ತಂದೆ&ತಾಯಿ ಮತ್ತು ಕುಟುಂಬದಿಂದ ಯುವ ಜನಾಂಗ ದೂರ ಸರಿಯುತ್ತಿದೆ. ನಮ್ಮ ಹಿರಿಯರ ಉತ್ತಮ ಮೌಲ್ಯಗಳನ್ನು ಯುವಜನಾಂಗ ಜೀವನದಲ್ಲಿ ಅಳವಡಿಸಿಕೊಂಡು ಸೌಹಾರ್ದತೆ ಮತ್ತು ಸಹಬಾಳ್ವೆಯ ಜೀವನ ಸಾಗಿಸಬೇಕು ಎಂದರು.

ಪಾರಿಶ್ವಾಡ ಹನಿವೆಲ್​ ಇಂಟರ್​ ನ್ಯಾಷನಲ್​ ಶಾಲೆಯ ಅಧ್ಯ ಸುಭಾಷ ಗುಳಶೆಟ್ಟಿ ಮಾತನಾಡಿ, ನಮ್ಮ ಹಿರಿಯರನ್ನು ಪೂಜಿಸಿದ ಈ ಭರತ ಭೂಮಿಯಲ್ಲಿ ಇಂದು ವದ್ಧಾಶ್ರಮಗಳು ಅನಿವಾರ್ಯ ಆಗುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದರು. ಗ್ರಾಪಂ ಸದಸ್ಯ ಅಶೋಕ ಕೊಡೊಳ್ಳಿ ಮಾತನಾಡಿ, ನಾವು ಎಲ್ಲ ಅಧಿಕಾರ ಮತ್ತು ಸಂಪತ್ತನ್ನು ಪಡೆದಿದ್ದು, ನಮ್ಮ ಹಿರಿಯರು ಹಾಕಿಕೊಟ್ಟ ಉತ್ತಮ ಸಂಸ್ಕಾರದಿಂದ ಎಂದರು. ಬಿಳಕಿ&ಅವರೊಳ್ಳಿ ರುದ್ರಸ್ವಾಮಿ ಮಠದ ಚೆನ್ನಬಸವ ದೇವರು, ಹಿರೇಮುನವಳ್ಳಿ ಶಾಂಡಿಲೇಶ್ವರ ಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಅರಳಿಕಟ್ಟಿಯ ಶಿವಮೂರ್ತಿ ಸ್ವಾಮೀಜಿ, ಜ್ಯೋತಿಭಾ ಭರಮಪ್ಪನವರ, ವಿಠ್ಠಲ ಹಿಂಡಲ್ಕರ, ಮಲ್ಲಪ್ಪ ಮಾರಿಹಾಳ, ಸಂಜಯ ಕುಬಲ, ನಾಗೇಂದ್ರ ಚೌಗಲಾ, ಮಾರುತಿ ಠಕ್ಕೇಕರ, ರಮೇಶ ಕೋಟಗಿ, ಬಿಷ್ಠಪ್ಪ ಬನೋಶಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net