ಭೀಮಾತೀರದಲ್ಲಿ ಭೀಕರ ಹತ್ಯೆ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ, ಕುಡಿಯಲು ಹಣ ಕೇಳಿದ್ದಕ್ಕೆ ಹೀಗಾ ಮಾಡೋದು....?

JaggeshUntitled-1
Published on

ವಿಜಯಪುರ: ಪದೇ ಪದೇ ಕುಡಿಯಲು ಹಣ ಕೇಳಿದ್ದಕ್ಕೆ ರೊಚ್ಚಿಗೆದ್ದ ಸಹೋದರ ಅಣ್ಣನನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಭೀಮಾತೀರ ಖ್ಯಾತಿಯ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಜಗ್ಗೇಶ್ ವಡ್ಡರ್‌ ಹತ್ಯೆಯಾಗಿರುವ ದುರ್ದೈವಿ. ದಿನಂಪ್ರತಿ ಕುಡಿಯಲು ಹಣ ಕೇಳುತ್ತಿದ್ದ ಅಣ್ಣ ಜಗ್ಗೇಶನ ಕಾಟಕ್ಕೆ ರೋಸಿಹೋಗಿದ್ದ ತಮ್ಮ ರಾಹುಲ್ ಹರಿತವಾದ ಆಯುಧದಿಂದ ಚುಚ್ಚಿ ಹತ್ಯೆ ಮಾಡಿದ್ದಾನೆ‌. ಸ್ಥಳಕ್ಕೆ ಚಡಚಣ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net