ಬಿಎಸ್‌ವೈ ನೇಪಥ್ಯಕ್ಕೆ ಸರಿಯುತ್ತಿದ್ದಾರೆ, ರಾಜ್ಯ ರಾಜಕಾರಣಕ್ಕೆ ಯಂಗ್‌ಬ್ಲಡ್ ಅವಶ್ಯಕ : ಪ್ರತಾಪ್ ಸಿಂಹ

PRATAP SIMHA
Published on

ಮೈಸೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಂತಹವರು ನೇಪಥ್ಯಕ್ಕೆ ಸರಿಯುತ್ತಿದ್ದಾರೆ. ನಮ್ಮ ಹಲವಾರು ಹಿರಿಯ ನಾಯಕರು ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ದೆಹಲಿಗೆ ಹೋಗಿದ್ದಾರೆ. ಹೀಗಾಗಿ ರಾಜ್ಯ ರಾಜಕಾರಣಕ್ಕೆ ಯಂಗ್‌ಬ್ಲಡ್ ಬರುವ ಅವಶ್ಯಕತೆ ಇದ್ದು, ಆ ದೃಷ್ಟಿಕೋನದಲ್ಲಿಟ್ಟುಕೊಂಡೇ ನನಗೆ ಈ ಬಾರಿ ಟಿಕೆಟ್ ನೀಡದೆ ರಾಜ್ಯ ರಾಜಕಾರಣದಲ್ಲಿ ಇರು ಎಂಬ ಸಂದೇಶ ದೊರೆತ್ತಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.

ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎರಡು ಬಾರಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಹಾಗಾಗಿ ಈ ಬಾರಿಯೂ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೆ. ಆದರೆ, ನನಗೆ ಟಿಕೆಟ್ ನೀಡದೆ ರಾಜ್ಯ ಕಾರಣದಲ್ಲಿ ಇರು ಎಂಬ ಸಂದೇಶ ದೊರೆತ್ತಿದ್ದು, ಆ ಕಾರಣ ರಾಜ್ಯ ರಾಜಕಾರಣದ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆ ಎಂದರು.

ರಾಜ್ಯದಲ್ಲೂ ಉತ್ತಮ ನಾಯಕರ ಅವಶ್ಯಕತೆ ಇದೆ. ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ನಮ್ಮ ವಿಚಾರಗಳನ್ನು ಪ್ರಬಲವಾಗಿ ಪ್ರತಿಪಾದಿಸುವವರ ಅವಶ್ಯಕತೆ ಇದೆ. ಹಾಗಾಗಿ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿ ಇರುತ್ತೇನೆ. ಕರ್ನಾಟಕವೇ ನನ್ನ ಕಾರ್ಯಕ್ಷೇತ್ರ, ಆದರೆ ಎಲ್ಲಿ ಎಂಬುದು ಗೊತ್ತಿಲ್ಲ. ಮೈಸೂರು ನನಗೆ ನೆಲೆ ಕೊಟ್ಟಿದೆ, ಪ್ರೀತಿ ಕೊಟ್ಟಿದೆ, ನನ್ನನ್ನು ಗೆಲ್ಲಿಸಿದೆ. ಹಾಗಾಗಿ ಮೈಸೂರಿನಲ್ಲೇ ಇರಲು ಬಸುತ್ತೇನೆ. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನನ್ನ ಹೆಸರು ಕೇಳಿ ಬರುತ್ತಿರುವ ವಿಚಾರ ಗೊತ್ತಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net