‘ಉಶ್ ಉಶ್’ ಎಂದು ಯುವತಿಯನ್ನು ಕರೆದ ಭೂಪನ ಮೇಲೆ ಎಫ್‌ಐಆರ್

Crime Logo
Published on

ಶಿಗ್ಗಾಂವಿ: ಮನೆ ಹಿತ್ತಲಿನಲ್ಲಿ ನಿಂತು 18 ವರ್ಷದ ಯುವತಿಯನ್ನು ‘ಉಶ್ ಉಶ್’ ಎಂದು ಕರೆದ ಆರೋಪಿಯೊಬ್ಬನ ವಿರುದ್ಧ ಇಲ್ಲಿಯ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಬಿಶೆಟ್ಟಿಕೊಪ್ಪದ ಜಗದೀಶ ನಿಂಗಪ್ಪ ಮಲ್ಲೂರ ಯುವತಿಯನ್ನು ಕರೆದ ಆರೋಪಿ.
ಈತ ಮನೆ ಹಿತ್ತಲಿನಲ್ಲಿ ನಿಂತು 18 ವರ್ಷದ ಯುವತಿಯನ್ನು ಉಶ್ ಉಶ್ ಎಂದು ಕರೆದಿದ್ದಾನೆ. ಆಕೆ ಏನು ಅಂತಾ ಕೇಳಿಗಾಗ ನನ್ನ ಜತೆ ಬರ್ತೀಯಾ ಎಂದು ಅಸಭ್ಯವಾಗಿ ಸನ್ನೆ ಮಾಡಿದ್ದಾನೆ. ಈ ಕುರಿತು ಯುವತಿ ತನ್ನ ಮನೆಯವರಿಗೆ ತಿಳಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net