ಮೈಸೂರು: ಮದುವೆಯಾಗುವಂತೆ ಯುವಕ, ಯುವತಿ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿರುವುದಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನ ಸುಭಾಷ್ ನಗರದ ವಾಸಿ, ಐಟಿ ಕಂಪನಿ ಉದ್ಯೋಗಿ ಮಹಿಳೆ, ಬೆಂಗಳೂರಿನ ಕೆಂಗೇರಿಯ ಸುಂಕಲ್ ಪಾಳ್ಯ ನಿವಾಸಿ ಮಧುನಂದನ್ ವಿರುದ್ಧ ದೂರು ನೀಡಿದ್ದಾರೆ.
ಜೂನ್ ತಿಂಗಳಿನಲ್ಲಿ ಯುವತಿ ಹಾಗೂ ಮಧುನಂದನ್ ಮದುವೆ ಮಾಡುವ ಬಗ್ಗೆ ಮಾತುಕತೆ ಆಗಿತ್ತು. ಬಳಿಕ ಕೌಟುಂಬಿಕ ವಿಚಾರಗಳಿಂದ ಯುವತಿ ಮದುವೆಯಾಗಲು ನಿರಾಕರಿಸಿ ಮದುವೆ ರದ್ದು ಮಾಡಿಕೊಂಡಿದ್ದರು. ಈ ದ್ವೇಷದ ಹಿನ್ನೆಲೆಯಲ್ಲಿ ಮಧುನಂದನ್ ತನ್ನ ಸಂಬಂಧಿಗಳೊಡನೆ ಬಂದು ಮದುವೆ ಆಗುವಂತೆ ಪೀಡಿಸಿದ್ದಲ್ಲದೆ, ಹಲ್ಲೆ ಮಾಡುವುದರೊಂದಿಗೆ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.