ಎರಡು ಬೈಕ್​ ನಡುವೆ ಡಿಕ್ಕಿ ಯುವತಿ ಸಾವು

Crime Logo
Published on

ಹಾನಗಲ್ಲ: ಎರಡು ಬೈಕ್​ಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್​ ಹಿಂದೆ ಕುಳಿತ್ತಿದ್ದ ಯುವತಿ ಮೃತಪಟ್ಟ ಘಟನೆ ತಾಲೂಕಿನ ಅಕ್ಕಿಆಲೂರ ಬಳಿ ಬುಧವಾರ ನಡೆದಿದೆ.

ತಾಲೂಕಿನ ಗೆಜ್ಜೆಹಳ್ಳಿ ನಿವಾಸಿ ಅನು ರಾಘು ಚಿನ್ನಳ್ಳಿ ಮೃತ ಯುವತಿ.

ಇವರು ಬೈಕ್​ ಮೇಲೆ ತೆರಳುತ್ತಿದ್ದ ಸಮಯದಲ್ಲಿ ಎದುರಿಗೆ ಬಂದ ಬೈಕ್​ಗೆ ನಡುವೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಅನು ಸ್ಥಳದಲ್ಲಿಯೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net