ಹಸಿ ಪಪ್ಪಾಯ ತಿಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಯುವತಿ

IMG-20230912-WA0030
Published on

ವಿಟ್ಲ: ಮಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವತಿಯೊಬ್ಬಳು ಮನೆಯಲ್ಲಿ ಹಸಿ ಪಪ್ಪಾಯ ತಿಂದು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾಳೆ.

ಪೆರುವಾಯಿ ಮುಕ್ಕುಡಾಪು ನಿವಾಸಿ ಆಶಾ (20) ಮೃತಪಟ್ಟವಳು. ಜ್ವರ ಬಂದು ಕಡಿಮೆಯಾಗಿದ್ದು, ಶನಿವಾರ ಮನೆಯಲ್ಲಿ ಹಸಿ ಪಪ್ಪಾಯಿಯನ್ನು ತಿಂದು ವಾಂತಿ ಹಾಗೂ ಅಲರ್ಜಿಗೊಳಗಾಗಿದ್ದಾಳೆ. ಪುತ್ತೂರು ಆಸ್ಪತ್ರೆಗೆ ಹೋಗುವ ಸಂದರ್ಭ ಕೋಮಾಕ್ಕೆ ಜಾರಿದ್ದು, ಅಲ್ಲಿಂದ ಮಂಗಳೂರಿಗೆ ವರ್ಗಾವಣೆ ಮಾಡಲು ಸೂಚಿಸಿದ್ದಾರೆ. ಈ ಸಂದರ್ಭ ಮುಖ ಊದಿಕೊಂಡಿತ್ತೆನ್ನಲಾಗಿದೆ.

ಮಂಗಳೂರಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ, ಮಂಗಳವಾರ ಮೃತಪಟ್ಟಿದ್ದಾಳೆ. ಈ ಸಂದರ್ಭ ಡೆಂಗ್ಯು ದೃಢವಾಗಿದ್ದರಿಂದ ಅದರಿಂದಲೇ ಮೃತ ಪಟ್ಟಿರುವ ಸಾಧ್ಯತೆಯನ್ನು ಆರೋಗ್ಯ ಇಲಾಖೆ ಹೇಳಿದೆ. ಕೆಲಸವನ್ನು ಮಂಗಳೂರಿನಲ್ಲಿ ಮಾಡುತ್ತಿದ್ದ ಕಾರಣ ಅಲ್ಲೇ ಡೆಂಗ್ಯು ಜ್ವರ ತಗುಲಿರುವ ಸಾಧ್ಯತೆಯಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net