

ಮೂಡುಬಿದಿರೆ: ಒಂಟಿಕಟ್ಟೆಯ ಯುವತಿ ಶುಕ್ರವಾರ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾಳೆ. ಮಾರ್ಪಾಡಿ ಗ್ರಾಮದ ನಾಗರಕಟ್ಟೆ ಅಬ್ಬಕ್ಕ ನಗರದ ನಿವಾಸಿ ಹರೀಶ್ ಕೋಟ್ಯಾನ್ ಎಂಬುವರ ಪುತ್ರಿ ಶರಣ್ಯಾ (19) ಆತ್ಮಹತ್ಯೆ ಮಾಡಿಕೊಂಡಾಕೆ. ಅವರು ಮೂಲ್ಕಿಯಲ್ಲಿ ಪ್ರಥಮ ವರ್ಷದ ಬಿಬಿಎ ವಿದ್ಯಾಭ್ಯಾಸ ಮಾಡುತ್ತಿದ್ದು, ನಾಲ್ಕು ತಿಂಗಳ ಹಿಂದೆ ಮೂಡುಬಿದಿರೆಯಲ್ಲಿರುವ ಮನೆಯಲ್ಲೇ ನೆಲೆಸಿದ್ದಳು. ಶುಕ್ರವಾರ ಹೆತ್ತವರು ಎಂದಿನಂತೆ ಮನೆಗೆ ಹೋದಾಗ ಆಕೆಯ ರೂಮ್ಗೆ ಚಿಲಕ ಹಾಕಿತ್ತು. ಹಿಂದೆ ಕಿಟಕಿಯ ಮೂಲಕ ಗಮನಿಸಿದಾಗ ಚೂಡಿದಾರದ ಶಾಲನ್ನು ಕಿಟಕಿಗೆ ಕಟ್ಟಿ ಆತ್ಮಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.