ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ

ಮೃತ ಶಶಿರೇಖಾ
ಮೃತ ಶಶಿರೇಖಾ
Published on

ಬೆಟ್ಟದಪುರ: ಕಿತ್ತೂರು ಗ್ರಾಮದ ನಿವಾಸಿ ಶಿವಣ್ಣ ಅವರ ಪುತ್ರಿ ಶಶಿರೇಖಾ (28) ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ವಾಸದ ಮನೆಯಲ್ಲಿ ನೇಣು ಬಿಗಿದುಕೊಂಡು ಮಂಗಳವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಾಮರಾಜನಗರ ಜಿಲ್ಲೆ ಹೊನ್ನೂರು ಗ್ರಾಮದ ಮಂಜುನಾಥ್ ಅವರನ್ನು 7 ವರ್ಷದಿಂದ ಪ್ರೀತಿಸುತ್ತಿದ್ದರು. ಹಾಗಾಗಿ ಮನೆಯವರ ಸಮ್ಮುಖದಲ್ಲಿ ಏ.23 ರಂದು ನಿಶ್ಚಿತಾರ್ಥ ಮಾಡಲಾಗಿತ್ತು. ಇದಾದ ಬಳಿಕ ಮದುವೆಯ ದಿನಾಂಕವನ್ನು ವಿನಾಕಾರಣ ಮುಂದೂಡಲಾಗುತ್ತಿತ್ತು.

ವರದಕ್ಷಿಣೆ ಕೊಡುವಂತೆ ಮಂಜುನಾಥ್ ಅವರ ತಾಯಿ ಸುಜಾತಾ ಹಾಗೂ ಸಂಬಂಧಿಕರಾದ ಜಯಮ್ಮ, ಶಕುಂತಲಾ, ರವಿ, ಸಣ್ಣಯ್ಯ ಪೀಡಿಸುತ್ತಿದ್ದರಿಂದ ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತಳ ತಂದೆ ಶಿವಣ್ಣ ಬುಧವಾರ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net