ರೈಲ್ವೆಯಲ್ಲಿ ಉದ್ಯೋಗದ ಭರವಸೆ: ವಂಚಿಸಿದ ಯುವತಿ ಬಂಧನ

Job Scams
Published on

ಕಾಸರಗೋಡು: ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಕೊಡಿಸುವ ಭರವಸೆ ನೀಡಿ ಹಣ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತಳಾಗಿರುವ ಕೊಲ್ಲಂ ಕೊಟ್ಟಿಯಂ ನಿವಾಸಿ ನಿಹಾಳ ಸಹಚರರಾದ ಐವರ ವಿರುದ್ಧ ಚೀಮೇನಿ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಕಣ್ಣೂರು ಮಕ್ರೇರಿ ನಿವಾಸಿ ಲಾಲ್‌ಚಂದ್, ಕಣ್ಣೂರು ಚೋಕ್ಲಿ ನಿವಾಸಿ ಶಶಿ, ಕೊಲ್ಲಂ ಪುನಲೂರು ನಿವಾಸಿ ಶರತ್ ಎಸ್.ಶಿವನ್, ಈತನ ಪತ್ನಿ ಎಬಿ ಹಾಗೂ ಪುನಲೂರಿನ ಗೀತಾರಾಣಿ ಎಂಬುವರಿಗೆ ಈ ಕೇಸು. ಚೀಮೇನಿ ನಿವಾಸಿ ವಿಜಯನ್ ಎಂಬುವರ ದೂರಿನ ಮೇರೆಗೆ ಇ ಕೇಸು ದಾಖಲಾಗಿದೆ.

ತನ್ನ ಪುತ್ರಿಗೆ ರೈಲ್ವೆಯಲ್ಲಿ ಕೆಲಸ ಕೊಡಿಸುವ ಭರವಸೆಯೊಂದಿಗೆ ತನ್ನಿಂದ 10.20ಲಕ್ಷ ರೂ.ಪಡೆದು ವಂಚಿಸಿರುವುದಾಗಿ ವಿಜಯನ್ ದೂರಿನಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net