ಗಾಂಜಾ ಸಾಗಿಸುತ್ತಿದ್ದ ಯುವತಿ ಬಂಧನ

arrested
Published on

ಕಾಸರಗೋಡು: ಗಾಂಜಾ ಸಾಗಿಸುತ್ತಿದ್ದ ಪಯ್ಯನ್ನೂರು ಎಡಾಟ್ ನಿವಾಸಿ ಪ್ರಜಿತಾ ಎಂಬಾಕೆಯನ್ನು ಹೊಸದುರ್ಗ ಅಬಕಾರಿ ದಳ ಸಿಬ್ಬಂದಿ ಬಂಧಿಸಿದ್ದಾರೆ. ಈಕೆ ವಶದಲ್ಲಿದ್ದ 12 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಓಣಂ ಸ್ಪೆಷಲ್ ಡ್ರೈವ್ ಅನ್ವಯ ನಡೆಸಿದ ಕಾರ್ಯಾಚರಣೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಯುವತಿಯನ್ನು ವಶಕ್ಕೆ ತೆಗೆದು ತಪಾಸಣೆಗೊಳಪಡಿಸಿದಾಗ ಗಾಂಜಾ ಪತ್ತೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net