ದಾರಿ ತಪ್ಪುತ್ತಿದೆ ಯುವ ಸಮಾಜ

byn (4)
Published on

ಬೈಂದೂರು: ಇಂದಿನ ಸಾವಾಜಿಕ ಸ್ಥಿತ್ಯಂತರ ಕಾಲಟ್ಟದಲ್ಲಿ ಸವಾಜದಲ್ಲಿ ಅನೇಕ ಬದಲಾವಣೆಗಳು ನಮ್ಮ ವಿದ್ಯಾರ್ಥಿ ಸಮುದಾಯದಲ್ಲಿ ಆತಂಕ ಉಂಟು ವಾಡುತ್ತಿದೆ. ಯುವ ಜನತೆ ದಾರಿ ತಪ್ಪುತ್ತಿದ್ದಾರೆ. ಮುಖ್ಯವಾಗಿ ಕೆಲವು ದುಶ್ಚಟದಿಂದ ಬಳಲುತ್ತಿದ್ದು ನಾವೆಲ್ಲರೂ ಅದನ್ನು ಪ್ರತಿರೋಧಿಸಬೇಕಾಗಿದೆ ಎಂದು ಶಿರೂರು ಗ್ರಾಪಂ ಆಧ್ಯಕ್ಷೆ ನಾಗರತ್ನ ಹೇಳಿದರು.

ಹಂಗಾರಕಟ್ಟೆ ಬಾಳ್ಕುದ್ರು ಆಭಿವೃದ್ಧಿ ಸಂಸ್ಥೆ, ಗ್ರಾಮ ಪಂಚಾಯಿತಿ ಶಿರೂರು, ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ವಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳು ಎಂಬ ವಾಹಿತಿ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಪಂ ವಾಜಿ ಸದಸ್ಯ, ಹಳೇ ವಿದ್ಯಾರ್ಥಿ ಸಂ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ವಾತನಾಡಿ, ನಾವು ನಮ್ಮ ದೈನಂದಿನ ಕೆಲಸವನ್ನು ಪ್ರಯತ್ನ ಪೂರ್ವವಾಗಿ ವಾಡಿದರೆ ಅಭ್ಯಾಸವಾಗುತ್ತದೆ. ಅಭ್ಯಾಸವಾದ ಮೇಲೆ ಅದನ್ನು ಬಿಡುವುದು ಕಷ್ಟ. ನಮ್ಮ ಯುವ ಜನತೆಯನ್ನು ಸಕಾಲದಲ್ಲಿ ಎಚ್ಚರಿಸುವ ಈ ಪ್ರಯತ್ನ ಅರ್ಥಪೂರ್ಣವಾಗಿದೆ ಎಂದರು.

ಶಿಕ್ಷಕ, ಸಂಪನ್ಮೂಲ ವ್ಯಕ್ತಿ ಮಂಜುನಾಥ ಡಿ.ಕೆ ವಾತನಾಡಿದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಮಹಮ್ಮದ್ ಗೌಸ್ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ವಿಭಾಗ ಮುಖ್ಯಶಿಕ್ಷಕಿ ಜಯಂತಿ ಶೆಟ್ಟಿ, ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ರಮೇಶ ವಕ್ವಾಡಿ ಉಪಸ್ಥಿತರಿದ್ದರು. ಅನಿಷಾ ಬ್ರಹ್ಮಾವರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net