ಹುಬ್ಬಳ್ಳಿಗರಿಗೆ ಯುವ ವಿಜ್ಞಾನಿ ಪ್ರಶಸ್ತಿ

IMG-20240127-WA0027.jpg
Published on

ಹುಬ್ಬಳ್ಳಿ: ಕಲಬುಗಿರ್ಯ ಸೇಡಂನಲ್ಲಿ ಆಯೋಜಿಸಿದ್ದ ವಿಜ್ಞಾನ ಸಮಾವೇಶದಲ್ಲಿ ನಗರದ ಇಬ್ಬರು ವಿದ್ಯಾಥಿರ್ಗಳು ಮಂಡಿಸಿದ್ದ "ಹೆದ್ದಾರಿಯಲ್ಲಿ ಬಲಿಯಾಗುತ್ತಿರುವ ಪ್ರಾಣಿಗಳ ಸಾವು ತಡೆಯುವಲ್ಲಿ ತಂತ್ರಜ್ಞಾನದ ಬಳಕೆ' ಸಂಶೋಧನಾ ಪ್ರಬಂಧ ಪ್ರಥಮ ಸ್ಥಾನ ಪಡೆದು ಪ್ರಶಸ್ತಿಗೆ ಆಯ್ಕೆಯಾಗಿದೆ.

ಇಲ್ಲಿಯ ಗೋಕುಲ ಎಸ್.ಆರ್. ಬೊಮ್ಮಾಯಿ ಸರ್ಕಾರಿ ಪ್ರೌಢಶಾಲೆಯ ವಿರೇಶಗೌಡ ಪಾಟೀಲ ಮತ್ತು ಹನುಮಂತ ಹೊಸಮನಿ ಅವರು ಮಂಡಿಸಿದ್ದ ಪ್ರಬಂಧಕ್ಕೆ ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿ ಬಂದಿದ್ದು, ಇದು 10 ಸಾವಿರ ರೂ. ನಗದು ಫಲಕ ಒಳಗೊಂಡಿದೆ.

ರಾಜ್ಯದ 300ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳಲ್ಲಿ 30 ಯೋಜನೆಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿವೆ. ಟಾಪ್ 4ರಲ್ಲಿದ್ದ ಗೋಕುಲ ತಂಡ ಯುವ ವಿಜ್ಞಾನಿ ಪ್ರಶಸ್ತಿ ಬಾಚಿಕೊಂಡಿದೆ. ಗೋಕುಲ ಶಾಲೆಯ ವಿದ್ಯಾಥಿರ್ಗಳ ಸಾಧನೆಗೆ ಬಿಇಒ ಉಮೇಶ ಬಮ್ಮಕ್ಕನವರ, ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಅಧ್ಯಕ್ಷ ಡಾ. ಲಿಂಗರಾಜ ರಾಮಾಪುರ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net